ಕೃಷ್ಣಾ ಪುಣ್ಯಸ್ನಾನ: ಇಬ್ಬರು ಯುವಕರ ನೀರು ಪಾಲು

ರಾಯಚೂರು.ಜ.೧೫-ಸಂಕ್ರಾಂತಿ ಪುಣ್ಯಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನಿನ್ನೆ ಕೃಷ್ಣಾ ನದಿ ನೀರು ಪಾಲಾಗಿದ್ದಾರೆ.
ತಾಲೂಕಿನ ದೇವಸೂಗೂರು ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಈ ಘಟನೆಯಲ್ಲಿ ನಿಧನರಾದವರನ್ನು ಗಣೇಶ್ (೩೦) , ಉದಯ ಕುಮಾರ್ (೩೧) ಎಂದು ಗುರುತಿಸಲಾಗಿದೆ.
ಗಣೇಶ್‌ನ ಮೃತ ದೇಹ ಪತ್ತೆಯಾಗಿದ್ದು, ಇನ್ನೋರ್ವ ಯುವಕ ಉದಯ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತರನ್ನು ರಾಯಚೂರು ನಗರದ ಕೆಇಬಿ ಕಾಲೋನಿ ನಿವಾಸಿಗಳಾಗಿದ್ದಾರೆ.
ಮೃತ ಗಣೇಶ ಜೆಸ್ಕಾಂ ಜೆಇ ಸಹೋದರನಾಗಿದ್ದು, ಉದಯಕುಮಾರ ಜೆಸ್ಕಾಂ ಲೈನ್‌ಮನ್ ಆಗಿದ್ದನು.
ಏಳು ಜನ ಸ್ನೇಹಿತರು ನಿನ್ನೆ ಸಂಜೆ ಪುಣ್ಯಸ್ನಾನಕ್ಕೆ ಕೃಷ್ಣಾ ನದಿಗೆ ತೆರಳಿದ್ದರು. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಸಂಕ್ರಾಂತಿಯ ಹಿನ್ನೆಲೆಯಲ್ಲಿ ನಿನ್ನೆಯಿಂದಿ ಪುಣ್ಯ ಸ್ನಾನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ನದಿಗಳಿಗೆ ತೆಳಿದ್ದರು. ಕೃಷ್ಣಾ ಮತ್ತು ತುಂಗಭದ್ರ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು. ನಿನ್ನೆ ಸಂಜೆ ನತದೃಷ್ಟ ಮೃತ ಯುವಕರು ಸೇರಿದಂತೆ ಒಟ್ಟು ಏಳು ಜನ ಸ್ನೇಹಿತರು ಸ್ನಾನಕ್ಕೆ ಶಕ್ತಿನಗರ ಬಳಿ ತೆರಳಿದ್ದರು. ನದಿಯಲ್ಲಿ ಈಜುವಾಗ ಇಬ್ಬರು ನೀರಿನ ಸೆಳತಕ್ಕೆ ಸಿಕ್ಕು ಮೃತ ಪಟ್ಟಿದ್ದಾರೆ. ಈ ಘಟನೆ ಉಬಯ ಕುಟುಂಬದವರು ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.