ಕೃಷ್ಣಾ ನದಿ : ಭಾರೀ ಗಾತ್ರದ ಮೊಸಳೆ

ರಾಯಚೂರು.ಡಿ.೨೭- ಕೃಷ್ಣಾ ನದಿಯಲ್ಲಿ ಮೊಸಳೆ ಇರುವ ಸಂಗತಿ ಎಲ್ಲಾರಿಗೂ ತಿಳಿದಿದೆಯದರೂ, ಇತ್ತೀಚಿಗೆ ಮೊಸಳೆ ಶಕ್ತಿನಗರ ಸೇತುವೆ ಬಳಿ ದಡ ಮೇಲೆ ಕೆಲ ಕ್ಷಣ ಉಳಿದು ಮತ್ತೇ ನದಿಗೆ ಮರಳಿದೆ.
ಭಾರೀ ಗಾತ್ರದ ಈ ಮೊಸಳೆ ದಡದ ಮೇಲೆ ಇರುವ ಚತ್ರ ಸೆರೆ ಹಿಡಿಯಲಾಗಿದೆ. ಕೃಷ್ಣಾ ನದಿಯಲ್ಲಿ ಭಾರೀ ಗಾತ್ರದ ಮೊಸಳೆ ಇರುವುದು ಸ್ಪಷ್ಟವಾಗಿದೆ. ಇತ್ತೀಚಿಗಷ್ಟೇ ಆತ್ಕೂರು ಬಳಿ ಬಾಲಕನೋರ್ವನ ರುಂಡಾ ಮಾತ್ರ ಉಳಿಸಿ, ಉಳಿದ ದೇಹದ ಭಾಗವನ್ನು ಮೊಸಳೆ ತಿಂದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಜನ ನದಿ ತೀರದಿಂದ ದೂರ ಉಳಿಯುವ ಮೂಲಕ ಸುರಕ್ಷತೆಯಿಂದ ಇರುವಂತೆ ಅಧಿಕಾರಿಗಳು ಸಹ ಸೂಚಿಸಿದ್ದಾರೆ. ಮೊಸಳೆಯ ಈ ಚಿತ್ರ ಈಗ ವಾಟ್ಸಾಪ್‌ಗಳಲ್ಲಿ ವೈರಲಾಗಿದೆ.