ಕೃಷ್ಣಾ ಕಾಲುವೆಯಿಂದ ಎಲ್ಲ ಹಳ್ಳ ಮತ್ತು ಡಿಸ್ಟ್ರೀಬ್ಯೂಟರ್ ಗಳಿಗೆ ನೀರು

ಇಂಡಿ:ಮೇ.31: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ತಾಲೂಕಿನ ಎಲ್ಲ ಹಳ್ಳಗಳಿಗೆ ಮತ್ತು ಎಲ್ಲ ಡಿಸ್ಟ್ರೀಬ್ಯೂಷನ್ ಕಾಲುವೆಗಳಿಗೆ ನೀರು ಬಿಡಲಾಗಿದೆ ಎಂದು ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.
ಇಂಡಿ ತಾಲೂಕಿನ ಇಂಡಿ, ಇಂಗಳಗಿ, ಮಾನೆ ವಸ್ತಿ, ಹಿರೇಬೇವನೂರ ತಾಂಡಾ, ಹಿರೇಬೇವನೂರ ಮತ್ತು ಭ್ಯೂಯ್ಯಾರ ಹಳ್ಳಗಳಿಗೆ ನೀರು ಬಿಟ್ಟಿದ್ದು ಆ ನೀರು ಭೀಮಾ ನದಿಗೆ ಸೇರುತ್ತಿದೆ ಎಂದು ತಿಳಿಸಿದ್ದಾರೆ.
ಅದಲ್ಲದೆ ಡಿಸ್ಟ್ರೀಬ್ಯುಷನ್ 22 ಕಾಲುವೆ ಯಿಂದ ನೀರು ಲಾಳಸಂಗಿ ಕೆರೆಗೆ ಬಿಡಲಾಗಿದೆ, ಅದಲ್ಲದೆ ಡಿಸ್ಟ್ರೀಬ್ಯೂಷನ್ 23 ರಿಂದ ಕಾಲುವೆ ಸೇರಿದಂತೆ ಎಲ್ಲ ಡಿಸ್ಟ್ರೀಬ್ಯೂಷನ್ ನಿಂದ ಕಾಲುವೆಯಲ್ಲಿ ನೀರು ಹರಿಸುತ್ತಿದೆ. ರೈತರಿಗೆ ಕುಡಿಯಲು ಮತ್ತು ಜನ ಜಾನುವಾರುಗಳಿಗಳಿಗೆ ಅನುಕೂಲವಾಗಲೆಂದು ನೀರು ಹರಿಸಲಾಗಿದೆ.
ಇದೇ ಪ್ರಥಮ ಬಾರಿಗೆ ಮೇ 22 ರಿಂದ 30 ರ ವರೆಗೆ ನೀರು ಹರಿದು ಬಿಡಲಾಗಿದೆ. ಇದೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಡಲಾಗಿದೆ ಎಂದು ಮನೋಜಕುಮಾರ ತಿಳಿಸಿದರು.
ವಿಜಯಕುಮಾರ ಎಇಇ ಸಾಲೋಟಗಿ, ಅರವಿಂದ ಪೋಳ ಎಇಇ ಸಾಲೋಟಗಿ, ಸುಧಾಕರ ಎಇ, ಮಹಮ್ಮದ ಸಾದಿಕ ಹೊನ್ನುಟಗಿ ಜೆಇ, ಭೀರಪ್ಪ ಪೂಜಾರಿ ಎಇ, ಸಾಜೀದ ನಲವತ್ತವಾಡ ಎಇ ಮತ್ತಿತರಿದ್ದರು.