
ವಿಜಯಪುರ,ಮಾ 4: ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಮೊಸಳೆ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಳಿಯ ಕೃಷ್ಣಾನದಿಯ ಸೇತುವೆ ಮೇಲೆ ನಡೆದಿದೆ.
ಹಗ್ಗ ಕಟ್ಟಿ ಬೇರೆಡೆಯಿಂದ ತಂದು ಬಿಟ್ಟಿರುವ ಸಾಧ್ಯತೆ ಇದೆ. ಅಲ್ಲದೇ, ಜನವಸತಿಗೆ ನುಗ್ಗಿದ ಸಂದರ್ಭದಲ್ಲಿ ಹಗ್ಗ ಕಟ್ಟಿ ಹಿಡಿಯುವ ವೇಳೆ ಮೊಸಳೆ ತಪ್ಪಿಸಿಕೊಂಡಿದೆ. ನಡು ರಸ್ತೆಯಲ್ಲಿ ಮೊಸಳೆ ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ.
ಸ್ಥಳಕ್ಕೆ ಕೊಲ್ಹಾರ ಪೆÇಲೀಸರು ಭೇಟಿ ನೀಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೊಸಳೆ ಬಾಯಿಗೆ ಕಟ್ಟಿದ್ದ ಹಗ್ಗ ಬಿಡಿಸಿ ಕೃಷ್ಣಾ ನದಿಗೆ ಮೊಸಳೆಯನ್ನು ಅರಣ್ಯಾಧಿಕಾರಿಗಳು ಬಿಡಲಿದ್ದಾರೆ. ಸ್ಥಳದಲ್ಲಿ ಮೊಸಳೆ ನೋಡಲು ಜನರ ದಂಡು ನೆರೆದಿದೆ.