ಕೃಷ್ಣಾನದಿ ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪಾದಯಾತ್ರೆ ಎಚ್ಚರಿಕೆ

ರಾಯಚೂರು, ಡಿ.೬-ಶಕ್ತಿನಗರ ಹತ್ತಿರ ಇರುವ ಕೃಷ್ಣಾನದಿ ಸೇತುವೆ ಕಾಮಗಾರಿ ನಿಂತುಹೋಗಿದ್ದು ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಡಿ. ವೀರೇಶ್ ಕುಮಾರ್ ಹೇಳಿದರು
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಕರ್ನಾಟಕದಿಂದ,ತೆಲಂಗಾಣಕ್ಕೆ ರಸ್ತೆ ದಾಟುವ ಏಕೈಕ ಕೃಷ್ಣನದಿ ಸೇತುವೆ ಇದಾಗಿದ್ದು,ಎನ್.ಹೆಚ್ -೧೬೭ ಕ್ಕೆ ಸಂಬಂಧಪಟ್ಟಿದ್ದು ,ಈ ಸೇತುವೆ ಮುಖ್ಯವಾಗಿದ್ದು.ಎನ್. ಹೆಚ್ -೧೬೭ ಹಾದುಹೋಗುವ ಗುಲಬರ್ಗಾ , ಹೈದ್ರಾಬಾದ್,ಮುಂಬೈಗೆ ಈ ಸೇತುವೆ ಮುಖಾಂತರ ಹೋಗಲು ಬಹಳ ಅನುಕೂಲಕರವಾಗಿದೆ.ದಿನಾಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಈ ಸೇತುವೆ ಮುಖಾಂತರ ಹೋಗುತ್ತಾರೆ.ಈ ಸೇತುವೆ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ.ಸುಮಾರು ದಿನಗಳಿಂದ ಇದನ್ನು ಮೇಲಿಂದ ಮೇಲೆ ದುರಸ್ತಿ ಕಾರ್ಯ ಮಾಡುತ್ತ ಇದ್ದಾರೆ. ಕೃಷ್ಣಾನದಿ ಪ್ರವಾಹ ಬಂದಾಗ ಈ ಸೇತುವೆ ದಾಟುವ ಸಮಯದಲ್ಲಿ ಭಯದ ಪರಿಸ್ಥಿತಿ ಉಂಟಾಗಿದೆ .ಮತ್ತು ಈ ಸೇತುವೆ ಮೇಲೆ ಬಹಳ ಅಪಘಾತಗಳು ಉಂಟಾಗಿ ಬಹಳ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಈ ಸೇತುವೆ ಬಹಳ ಹಳೆಯದಾಗಿದ್ದು.ಇದನ್ನು ಪರಿಗಣಿಸಿ ಎನ್.ಹೆಚ್ . – ೧೬೭ ಹಗರಿ ಜಡಚರ್ಲಾ ಸೆಕ್ಷನ್ ಕರ್ನಾಟಕ ರಾಜ್ಯ ಟೆಂಡರ್ ಆಗಿದ್ದು, ಈ ಕಾಮಗಾರಿಯನ್ನು
ತೇಜಸ್ ಸೂಪರ್ ಸ್ಟ್ರಕ್ಚರ್ಸ್ ಪ್ರೈ. ಲಿಮಿಟೆಡ್. ಉಸ್ಮಾನಾಬಾದ್, ಮಹಾರಾಷ್ಟ್ರ ಇವರಿಗೆ ಸೇತುವೆ ಕಾಮಗಾರಿ ಟೆಂಡರ್ ಮುಖಾಂತರ ನೀಡಲಾಗಿದೆ. ೨೮ ೨ ೨೦೧೭ ರಲ್ಲಿ ಒಟ್ಟು ರೂ.೧೫೭.೩೨ ಕೋಟಿ ಟೆಂಡರ್ ಆಗಿತ್ತು. ಪುನ ೨೦೧೯ ರಲ್ಲಿ ೧೮೭.೬೧ ಕೋಟಿಗೆ ಈ ಕಂಪನಿ ಅವರಿಗೆ ತೆಂಡರ್ ಹಾಗಿದೆ. ಎರಡು ವರ್ಷ ಗತಿಸಿದರೂ ಇಲ್ಲಿಯವರೆಗೆ ಸೇತುವೆ ಕಾಮಗಾರಿ ಪ್ರಾರಂಭ ಮಾಡಿಲ್ಲ.ಎರಡು ತಿಂಗಳೊಳಗೆ ಕಾಮಗಾರಿ ಪ್ರಾರಂಭ ಮಾಡದೇ ಇದ್ದರೆ ಶಕ್ತಿ ನಗರದಿಂದ ರಾಯಚೂರು ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುರೇಶ್, ಸೂಗಪ್ಪ, ಹನುಮಂತ ಸೇರಿದಂತೆ ಇತರರು ಇದ್ದರು.