ಕೃಷ್ಣಾನಗರದಲ್ಲಿ ದೇವಿ ಪುರಾಣ


ಸಂಜೆವಾಣಿ ವಾರ್ತೆ
ಸಂಡೂರು ಅ::19: ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ದಸರಾ ಉತ್ಸವದ ಪ್ರಯುಕ್ತ ದೇವಿ ಪುರಾಣ ಪ್ರತಿವರ್ಷದಂತೆ ಈ ವರ್ಷವೂ ಸಂಪ್ರದಾಯ ಮೀರದಂತೆ ಗ್ರಾಮದ ಊರಮ್ಮ ದೇವಿಯ ದೇವಸ್ಥಾನದಲ್ಲಿ ಶ್ರೀ ಗುರು ಚಿದಾನಂದಾವಧೂತ ವಿರಚಿತ ದೇವಿ ಪುರಣಾ ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗಿ 4ನೇ ದಿನಕ್ಕೆ ಮುಂದುವರೆದಿದ್ದು ಮಹಿಷಾಸುರಣ ಸಂಹಾರ ಕಥಾ ಪ್ರಸಂಗವು ಗ್ರಾಮೀಣ ಭಾಗದ ಸೊಗಡಿನಲ್ಲಿ ಅರ್ಥಪೂಣ್ವಾಗಿ ನಡೆಯಿತು. ಚಂದ್ರಶೇಖರ ಮೆಟಿ ಕೃಷ್ಣಾನಗರ ಪ್ರವಚನ ಮಾಡಿದರೆ ಅದೇ ಗ್ರಾಮದ ಗಂಡಿಬಸವೇಶ್ವರ ದೇವಸ್ಥಾನದ ಅರ್ಚಕ ವೀರಯ್ಯಸ್ವಾಮಿಯವರು ಪಠಿಸಿದರು. ಈ ಗ್ರಾಮದಲ್ಲಿ ಸಂಗೀತದ ಅಬ್ಬರವಿಲ್ಲ ವ್ಯರ್ಥ ಕಾಲಹರಣ ಇಲ್ಲ. ಪಠಣಕಾರರು ಮತ್ತು ಪ್ರವಚನ ಕಾರರು ಮುಖ್ಯಸ್ಥರಾಗಿರುವದು ಊರಿನ ಸರ್ವ ಮುಖಂಡರು ದೇವಿ ಮಹಾತ್ಮೆ ಚರಿತ್ರೆಯಲ್ಲಿ ಭಗವಹಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.