ಕೃಷ್ಣವಾದಿರಾಜ ಮಠದಲ್ಲಿ ವಸಂತ ಧಾರ್ಮಿಕ ಶಿಬಿರ

ವಿಜಯಪುರ,ಮೇ.10:ಇಲ್ಲಿಯ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರ ಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಮೇ.9ರಿಂದ 15 ರ ವರೆಗೆ ವಸಂತ ಧಾರ್ಮಿಕ ಶಿಬಿರವನ್ನು ಆರಂಭಿಸಲಾಗಿದೆ.
ಶಿಬಿರದಲ್ಲಿ 5 ವರ್ಷದ ( ಬಾಲಕ -ಬಾಲಕಿ) ಮಕ್ಕಳಿಂದ 80 ವರ್ಷದ ಎಲ್ಲ ವಿಪ್ರ ಪುರುಷ-ಸ್ತ್ರೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕøತಿಕ ವಿಷಯಗಳನ್ನು ಬೋಧಿಸಲಾಗುತ್ತಿದೆ. ಮಕ್ಕಳಿಗೆ ಸಂಧ್ಯಾ ವಂದನೆ, ಹಿರಿಯರಿಗೆ ದೇವರ ಪೂಜೆ, ಸ್ತೋತ್ರಗಳು ಸ್ತ್ರೀಯರಿಗೆ ಸ್ತ್ರೀಧರ್ಮ ಇತ್ಯಾದಿ ಪಾಠ ಹೇಳಿಕೊಡಲಾಗುತ್ತಿದೆ.
ಶಿಬಿರವು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಹಾಗೂ ಸ್ತ್ರೀಯರಿಗೆ ಸಂಜೆ 4-40ರಿಂದ 6-30 ಗಂಟೆ ವರೆಗೆ,ಮಕ್ಕಳಿಗೆ ಮಧ್ಯಾನ್ಹದ ಭೋಜನ ಹಾಗೂ ಸಂಜೆ ಪಾನೀಯ ವ್ಯವಸ್ಥೆ ಇರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವದು.
ಕಾರಣ ಎಲ್ಲ ವಿಪ್ರ ಬಂಧುಗಳು ಈ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಸರ್ವ ಸದಸ್ಯರು ಕೋರಿರುವರು. ಹೆಚ್ಚಿನ ಮಾಹಿತಿಗಾಗಿ ಮೊ.9448955210 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.