ಕೃಷ್ಣರಾಜ, ಚಾಮರಾಜದಲ್ಲಿ ಬೊಮ್ಮಾಯಿ ರೋಡ್ ಶೋ

ಮೈಸೂರು: ಮೇ.02:- ಅಗ್ರಹಾರದಲ್ಲಿ ತೆರೆದ ವಾಹನ ಮೇಲೆರುತ್ತಿದ್ದಂತೆ ಕೈ ಬೀಸಿದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಯಿತು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರಿಗೆ ಮತ ನೀಡುವಂತೆ ಬೊಮ್ಮಾಯಿ ಅವರು ಜನರಲ್ಲಿ ಮನವಿ ಮಾಡಿದರು. ಅವರೊಂದಿಗೆ ನಟಿ ತಾರಾ ಅನುರಾಧಾ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಇದ್ದರು.
ನಗರದ ಅಗ್ರಹಾರದಿಂದ ಮಧ್ಯಾಹ್ನ 2.30ಕ್ಕೆ ಸಿಎಂ ರೋಡ್ ಆರಂಭವಾಯಿತು. ರೋಡ್ ಶೋನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಮೂರು ದಶಕದಿಂದಲೂ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವನ್ನು ಸಾಧಿಸಿದೆ. ಶಾಸಕರು ಹಾಗೂ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದೆ. ಪ್ರತಿಷ್ಠಿತ ಚುನಾವಣೆಯಲ್ಲಿ ಪಕ್ಷವು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದೆ. ಶೇ.100ರಷ್ಟು ಗೆಲುವು ನಮ್ಮದೇ ಆಗಲಿದೆ. ಡಬಲ್ ಎಂಜಿನ್ ಸರ್ಕಾರದ ಕಾರ್ಯಕ್ರಮಗಳಿಂದ ಹತಾಶಗೊಂಡ ಕಾಂಗ್ರೆಸ್ ನಕರಾತ್ಮಕ ರಾಜಕಾರಣ ಮಾಡುತ್ತಿದೆ. ಅವರನ್ನು ಕ್ಷೇತ್ರದ ಜನರು ತಿರಸ್ಕರಿಸಲಿದ್ದಾರೆ. ಕೃಷ್ಣರಾಜದಲ್ಲಿ ಕಮಲ ಈ ಬಾರಿಯೂ ಅರಳಲಿದೆ. ಶ್ರೀವತ್ಸ ಶಾಸಕರಾಗಲಿದ್ದಾರೆ ಎಂದರು. ರೈತರಿಗಾಗಿ ಕಿಸಾನ್ ಸಮ್ಮಾನ್, ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್, ಸೂರಿಲ್ಲದವರಿಗೆ ಪಿಎಂ ಆವಾಸ್ ಯೋಜನೆಗಳೂ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನಕಲ್ಯಾಣಕ್ಕೆ ಬದ್ಧವಾಗಿ ನಡೆದುಕೊಂಡಿದೆ. ಸ್ಮರ?ಟ್ ಸಿಟಿ ಯೋಜನೆಯಡಿ ಎಲ್ಲ ನಗರಗಳು ಅಭಿವೃದ್ಧಿಯಾಗಿವೆ. ಮೈಸೂರಿಗರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಪ್ರೀತಿಯಿದೆ. ಯೋಗ ದಿನಾಚರಣೆಗೆ ಇದೇ ನಗರ ಆಯ್ಕೆ ಮಾಡಿಕೊಂಡರು. ಬೃಹತ್ ರೋಡ್ ಶೋ ನಡೆಸಿದರು. ಕಳೆದ 5 ರ?ಷದಲ್ಲಿ ವೇಗವಾಗಿ ಬೆಳವಣಿಗೆಯಾಗಿದೆ' ಎಂದು ಶ್ಲಾಘಿಸಿದರು. ನಗರಕ್ಕೆ 250 ಕೋಟಿ ಅನುದಾನ ನೀಡಲಾಗಿದೆ. ದಸರಾಗೆ 25 ಕೋಟಿ, ಕೆ.ಆರ್.ಆಸ್ಪತ್ರೆ ಕಾಯಕಲ್ಪಕ್ಕೆ 89 ಕೋಟಿ ನೀಡಲಾಗಿದೆ. ಮೈಸೂರು ಪ್ರವಾಸೋದ್ಯಮ ಸರ್ಕಿಟ್ ರಚಿಸಲಾಗಿದ್ದು, ಕಾರ್ಯಾರಂಭ ಮಾಡಿದೆ. ವಿದೇಶಿ ಯಾತ್ರಿಗಳು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಅದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಮಹಾರಾಜ, ಮಹಾರಾಣಿ ಕಾಲೇಜುಗಳ ದುರಸ್ತಿಗೆ ಅನುದಾನ ನೀಡಲಾಗಿದೆ. ಎಲ್ಲ ವಿದ್ಯರ?ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಪದವಿವರೆಗೂ ಮಹಿಳೆಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು. ನಟಿ ತಾರಾ ಅನುರಾಧಾ ಮಾತನಾಡಿ,ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ರಥಯಾತ್ರೆ ನಡೆಯುತ್ತಿದ್ದು, ನಮಗೆ ಸಂದೇಹವಿಲ್ಲ. ರಾಜ್ಯದ 224 ಕ್ಷೇತ್ರದ ಜನರೂ ಡಬಲ್ ಎಂಜಿನ್ ರ?ಕಾರಕ್ಕೆ ಮತ ಚಲಾಯಿಸಲಿದ್ದಾರೆ’ ಎಂದು ಹೇಳಿದರು. ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಕೆ.ಆರ್.ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ವಡಿವೇಲು ಇದ್ದರು.
ನಾಲಾಯಕ್ ಎಂದವರನ್ನು ಕ್ಷಮಿಸಬೇಕೇ?
ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದಿದ್ದಾರೆ. ಅವರನ್ನು ಕ್ಷಮಿಸುತ್ತೀರಾ' ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಕಾಂಗ್ರೆಸ್‍ನ ಗ್ಯಾರೆಂಟಿಗಳನ್ನು ನಂಬಬಾರದು. ಚುನಾವಣೆಯಲ್ಲಿ ವಂಚಿಸುವ ಕೆಲಸವನ್ನು ಮೊದಲಿನಿಂದಲೂ ಆ ಪಕ್ಷ ಮಾಡುತ್ತಿದೆ. ಎಲ್ಲ ಹಣವನ್ನು ದುಂದುವೆಚ್ಚ ಮಾಡಿದರೆ ರಾಜ್ಯ ದಿವಾಳಿ ಆಗಲಿದೆ. ಮೇ 10ರವರೆಗೆ ಕಾಂಗ್ರೆಸ್ಸಿಗರು ಗ್ಯಾರಂಟಿ ಎನ್ನುತ್ತಾರೆ. ನಂತರ ಗಳಗಂಟಿ ಎನ್ನಲಿದ್ದಾರೆ’ ಎಂದು ವ್ಯಂಗ್ಯವಾಡಿದರು.