ಕೃಷ್ಣಯ್ಯ ಶೆಟ್ಟಿರಿಂದ ಬಿಜೆಪಿ ಮುಖಂಡ ನಾರಾಯಣರೆಡ್ಡಿ ಭೇಟಿ

ಮಾಲೂರು.ನ೧೯_ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ನಂತರ ಕೋದಂಡರಾಮಸ್ವಾಮಿ ದೇವಾಲಯದ ಮಾಜಿ ಸಂಚಾಲಕ ಹಾಗೂ ಹಿರಿಯ ಬಿಜೆಪಿ ಮುಖಂಡ ನಾರಾಯಣರೆಡ್ಡಿ(ಮೊಕರೆಡ್ಡಿ) ಅವರ ಮನೆಗೆ ಬೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು.
ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೇಟ್ಟಿ ಅವರು ಬಸ್ ನಿಲ್ದಾಣದ ಬಳಿ ಬಂದು ನಂದಿನಿ ಹಾಲಿನ ಕೇಂದ್ರದ ಬಳಿ ಇದ್ದ ಮುಖಂಡರು, ಸ್ನೇಹಿತರು, ಅಭಿಮಾನಿಗಳನ್ನು ಮಾತನಾಡಿಸಿ ಅವರ ಜೊತೆಯಲ್ಲಿ ಚಹ ಸೇವಿಸಿ ಪಟ್ಟಣದ ಆರ್.ಎಫ್. ರಸ್ತೆಯಲ್ಲಿರುವ ಶಂಕರಪ್ಪನವರ ಹೋಟೆಲ್‌ಗೆ ಮುಖಂಡ ಆರ್.ಪ್ರಭಾಕರ್ ಅವರ ದ್ವಿಚಕ್ರವಾಹನದಲ್ಲಿ ತೆರಳಿ ಬೆಳಗಿನ ಉಪಹಾರ ಸೇವಿಸಿದರು.
ಅನಾರೋಗ್ಯದ ಕಾರಣ ಮನೆಯಲ್ಲಿಯೇ ಇದ್ದ ಬಿಜೆಪಿ ಮುಖಂಡ ನಾರಾಯಣರೆಡ್ಡಿ(ಮೋಕರೆಡ್ಡಿ) ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಫಲು ನೀಡಿ ಆಶಿರ್ವಾದ ಪಡೆದರು. ನಂತರ ಮಾತನಾಡಿದ ಅವರು ಪಟ್ಟಣಕ್ಕೆ ಬೆಳಗಿನ ಜಾವ ಆಗಮಿಸಿ ಹಲವು ವರ್ಷಗಳೆ ಆಗಿತ್ತು, ಬುಧವಾರ ಬೆಳಗಿನ ಜಾವ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ನಂದಿನಿ ಹಾಲಿನ ಕೇಂದ್ರದ ಬಳಿ ಎಲ್ಲಾ ಮುಖಂಡರು, ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಕಂಡು ಸಂತಸವಾಗಿದೆ ಎಂಧರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಲಕ್ಷ್ಮೀನಾರಾಯಣ್, ಆರ್.ಪ್ರಭಾಕರ್, ಪುರಸಭಾ ಸದಸ್ಯರಾದ ಎಂ.ವಿ.ವೇಮನ, ಭಾನುತೇಜ, ಮಾಜಿ ಅಧ್ಯಕ್ಷ ದೇವರಾಜರೆಡ್ಡಿ, ಯೋಜನಾಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ಕೆ.ಆಂಜಿನಪ್ಪ, ದಿನೇಶ್‌ಗೌಡ, ಗೋಪಾಲ್, ರಾಜು, ಗಣೇಶ್, ಭಾವನಹಳ್ಳಿ ಚಂದ್ರಪ್ಪ, ಚಲಪತಿ, ಇನ್ನಿತರರು ಹಾಜರಿದ್ದರು.