ಕೃಷ್ಣಮೃಗದ ರಕ್ಷಣೆ


ಲಕ್ಷ್ಮೇಶ್ವರ,ಡಿ.10: ಕಾಲು ನೋವಿನಿಂದ ಬಳಲುತ್ತಿದ್ದ ಕೃಷ್ಣಮೃಗವನ್ನು ತಾಲ್ಲೂಕಿನ ರಾಮಗೇರಿ ಗ್ರಾಮದ ಜನ ರಕ್ಷಿಸಿದ್ದಾರೆ. ಕಳೆದ ಒಂದು ವಾರದಿಂದ ಕೃಷ್ಣಮೃಗ ಸಂಜೆ ವೇಳೆಗೆ ಆಗಾಗ ಗ್ರಾಮದ ಕಡೆ ಕುಂಟುತ್ತ ಬರುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಶುಕ್ರವಾರ ರಾತ್ರಿ ಕೃಷ್ಣಮೃಗವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಕೃಷ್ಣಮೃಗವನ್ನು ಹೆಚ್ಚಿನ ಆರೈಕೆಗಾಗಿ ಬಿಂಕದಕಟ್ಟಿಯ ಪ್ರಾಣಿ ಸಂಗ್ರಾಹಾಲಯಕ್ಕೆ ಕಳಿಸಿದರು.
ಸೂಕ್ತ ಸಮಯದಲ್ಲಿ ಕೃಷ್ಣಮೃಗ ರಕ್ಷಿಸಿದ ಬಸವರಾಜ ಬೆಟಗೇರಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಕಾಳಿ, ದುರ್ಗಪ್ಪ ದೊಡ್ಡಮನಿ, ಗಾಳೆಪ್ಪ ಹುಲಗೂರ, ಮಾರುತಿ ಗೋಣೆಪ್ಪನವರ, ಉಡಚಪ್ಪ ಹಿತ್ತಲಮನಿ ಅವರ ಮಾನವೀಯತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶ್ಲ್ಯಾಘಿಸಿದ್ದಾರೆ.
**