ಕೃಷ್ಣಮೂರ್ತಿ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು, ಹಂಪಲು ವಿತರಣೆ

ಚಾಮರಾಜನಗರ, ಮಾ. 24- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ನಗರದ ಜಿಲ್ಲಾ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಬ್ರೆಡ್ ವಿತರಣೆ ಮಾಡಿದರು.
ನಗರದ ಜಿಲ್ಲಾ ಅಸ್ಪತ್ರೆಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ಮಹದೇವ್ ಹಾಗೂ ಮುಖಂಡರು ಅಸ್ಪತ್ರೆಯ ಮುಖ್ಯಸ್ಥರಾದ ಡಾ. ರಮೇಶ್, ಡಾ. ಕೃಷ್ಣಪ್ರಸಾದ್, ಡಾ. ಶರತ್ ಅವರ ನೇತೃತ್ವದಲ್ಲಿ ವಾರ್ಡುಗಳಿಗೆ ತೆರೆಳಿಗೆ ಹಣ್ಣು ಹಂಪಲುಗಳನ್ನು ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಳಗದ ಅಧ್ಯಕ್ಷ ಆರ್. ಮಹದೇವ್, ನಮ್ಮ ನೆಚ್ಚಿನ ನಾಯಕರಾದ ಎ.ಆರ್.ಕೃಷ್ಣಮೂರ್ತಿ ಅವರು 59 ವಸಂತಗಳನ್ನು ಪೊರೈಸಿ 60ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ರಾಜಕೀಯ ಅಧಿಕಾರ ಪ್ರಾಪ್ತಿಯಾಗಲಿ. ಭಗವಂತ ಆಯುಷ್ಯ ಆರೋಗ್ಯವನ್ನು ನೀಡಿ, ಮುಂದಿನ ದಿನಗಳಲ್ಲಿ ಅವರ ರಾಜಕೀಯ ಸ್ಥಾನಮಾನಗಳನ್ನು ಪಡೆದುಕೊಂಡು ಜನ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಆಸ್ಪತ್ರೆಯಲ್ಲಿರುವ 200ಕ್ಕು ಹೆಚ್ಚು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾ ಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಸಿದ್ದಯ್ಯನಪುರ ಗೋವಿಂದರಾಜು, ಕಾಗಲವಾಡಿ ಶಿವಸ್ವಾಮಿ, ಜ್ಯೋತಿಗೌಡನಪುರ ಜೆ.ಎಂ. ಮರಿ ಸ್ವಾಮಿ, ಮಹದೇವಸ್ವಾಮಿ, ಲಿಂಗರಾಜು, ಹೆಬ್ಬ ಸೂರು ರಂಗಸ್ವಾಮಿ, ಬ್ಯಾಡಮೂಡ್ಲು ರಾಜಣ್ಣ, ದೊರೆಸ್ವಾಮಿ, ಸವಿತಾ ಸಮಾಜದ ಅಧ್ಯಕ್ಷ ಚಿನ್ನಸ್ವಾಮಿ, ರಮೇಶ್, ಮಹದೇವಸ್ವಾಮಿ. ಬಿ. ನಿಂಗಯ್ಯ, ಹೆಬ್ಬಸೂರು ಗ್ರಾ.ಪಂ .ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರಾದ ಶಿವಣ್ಣ, ಮಧು, ಗೋವಿಂದರಾಜು, ಗಣೇಶ್, ಲಿಂಗರಾಜು, ಮಲ್ಲೇಶ,ಕೇಶವಮೂರ್ತಿ, ಡಿ. ಪುಟ್ಟಸ್ವಾಮಿ, ಕಾರು ಚಾಲಕರ ಸಂಘದ ಮಹೇಶ್, ನಾಗರಾಜು, ಮುರುಗೇಶ್, ನಂದ, ಶಿವಣ್ಣ, ಶಿವು, ಡಿ. ಸ್ವಾಮಿ ಮೊದಲಾದವರು ಇದ್ದರು.