ಕೃಷ್ಣನ ಬಾಲಲೀಲೆ ನೆನಪಿಸುವ ಪಂಚಮಿಗಿಂಡಿ ಕೋಲಾಟ

ಶಹಾಪುರ:ನ.21:ಭಗವಾನ್ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಪಂಚಮಿಗಿಂಡಿ ಕೋಲಾಟವನ್ನು ಐದು ದಿನಗಳವರೆಗೆ ಹಳೆಪೇಟೆ ಓಣಿಯ ಬಾಲಕೀಯರು ಬಣ್ಣಬಣ್ಣದ ವೇಷಭೂಷಣ ಧರಿಸಿ, ನೃತ್ಯ ಮಾಡುವ ಮೂಲಕ ದೇವರನಾಮವನ್ನು ಪ್ರಸ್ತುತಪಡಿಸುವ ಕಾರ್ಯಕ್ರಮವನ್ನು ಸರ್ವರÀೂ ಭಕ್ತಿಯ ಜೊತೆ ಆನಂದದ ಕ್ಷಣಗಳನ್ನು ಕಣ್ಣಿಗೆ ತುಂಬಿಕೊಂಡರು.

ದೀಪಾವಳಿ ಪಾಡ್ಯದಿಂದ ಪಂಚಮಿವರೆಗೆ ಪ್ರತಿಯೊಬ್ಬರು ಮನೆಯಿಂದ ನೀರುತುಂಬಿದ ಹಿತ್ತಾಳೆ, ತಾಮ್ರದ ಸಣ್ಣಸಣ್ಣ ಗಿಂಡಿಗಳಿಗೆ ಅರಳಿಎಲೆ, ಹೂವುಹಾರಗಳಿಂದ ಅಲಂಕಾರ ಮಾಡಿ ದೇವಸ್ಥಾನದ ಆವರಣದಲ್ಲಿ ಇಟ್ಟು ಅದರ ಸುತ್ತಲೂ ಕುಣಿಯುತ್ತಾ, ಹಾಡುತ್ತಾ ಶ್ರೀಕೃಷ್ಣರಾಧೆ, ಗೋಪಿಕಾ ಸ್ತ್ರೀಯರ ಬಾಲಲೀಲೆಗಳನ್ನು ಪ್ರದರ್ಶಿಸುವುದು, ಓಣಿಯ ಮಾತೆಯರು ಚಿಕ್ಕವರಿಗೆ ಹಿನ್ನಲೆ ಹಾಡು ಹೇಳುತ್ತಾ, ಪ್ರೋತ್ಸಾಹ ನೀಡುತ್ತಾರೆ, ದಿನನಿತ್ಯ ಮನೆಯಿಂದ ಪ್ರಸಾದ ತಂದು ಪರಸ್ಪರ ಹಂಚಿಕೊಳ್ಳುತ್ತಾರೆ, ಹಿರಿಯರ ಮಾರ್ಗದರ್ಶನದಲ್ಲಿ ಧಾರ್ಮಿಕತೆಯ ನೆಲೆಯಲ್ಲಿ ಪರಂಪರೆ ಸಂಸ್ಕøತಿ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆ ಸಣ್ಣ ಮಕ್ಕಳಿಗೆ ಪ್ರೇರಣೆಯು ಸಿಗುತ್ತದೆ ಎಂಬುವುದು ಐದು ದಿನದ ಕಾರ್ಯಕ್ರಮಕ್ಕೆ ಮೇಲ್ಪಂಕ್ತಿಯಾಗಿದೆ.