ಕೃಷಿ ಹೊಂಡಾ ಬದು ನಿರ್ಮಾಣದಿಂದ ಅಂತರ್ಜಲದ ಮಟ್ಟ ಹೆಚ್ಚಿಗೆ

ಎಮ್ಮಿಗನೂರು, ಮೇ.03: ಕೃಷಿ ಹೊಂಡಾ ಹಾಗೂ ಬದು ನಿರ್ಮಾಣದಿಂದ ಅಂತರ್ಜಲದ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿಅದಿಕಾರಿ ಶ್ರೀಧರ ತಿಳಿಸಿದರು
ಅವರು ಎಮ್ಮಿಗನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 15ಮೀ, 15ಮೀ,3ಮೀ ಅಳತೆಯ ಕೃಷಿಹೋಂಡಾ ಹಾಗೂ ಬದು ನಿರ್ಮಾಣದ ಕಾಮಗಾರಿಯನ್ನು ಪರಿಶಿಲಿಸಿ ಮಾತನಾಡಿ. ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಕೃಷಿಕಾರ್ಮಿಕರು ಗುಳೆಹೋಗುವುದನ್ನು ತಡೆಯುತ್ತಿದೆ, ಜೊತೆಗೆ ರೈತರ ಜಮೀನುಗಳಲ್ಲಿ ನಾನಾ ರೀತಿಯ ಸೌಲಭ್ಯಗಳು ಮತ್ತು ಮಣ್ಣು,ನೀರು ಕೊಚ್ಚಿಹೋಗಲಾರದಂತೆ ತಡೆಯುತ್ತಿದೆ. ಇದರಿಂದ ಮಣ್ಣಿನ ಭದ್ರತೆ, ಜಮೀನಿನ ಪಲವತ್ತತೆ ಹೆಚ್ಚಾಗುತ್ತಿದೆ ಎಂದರು. ಕ್ರುಷಿಹೊಂಡಾದಲ್ಲಿ ಮಳೆನೀರು ತುಂಬುವುದರಿಂದ ಧನ,ಕರು, ಪ್ರಾಣಿ,ಪಕ್ಷಿಗಳಿಗೆ ನೀರು ಕುಡಿಯುಲು ಸಹಾಯವಾಗುತ್ತಿದೆ ಎಂದು ಹೇಳಿದರು ಈವೇಳೆ ಸಹಾಯಕಿ ಕೃಷಿ ಅಧಿಕಾರಿ ಲಕ್ಷ್ಮಿ, ತಾಂತ್ರೀಕ ಸಹಾಯಕ ರೇಣುಕಾರಾದ್ಯ, ಕಂಪ್ಲಿ ರೈತ ಸಂಪರ್ಕ ಕೇಂದ್ರ ಅನವುಗಾರ ಬಸಯ್ಯ ಜಿ.ಎಂ, ಹಾಗೂ ರೈತರು ಹಾಗೂ ಕೂಲಿ ಕಾರ್ಮಿಕರು ಇದ್ದರು.