ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವು

ಮಂಡ್ಯ, ಏ.8- ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕಿನ ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಬಳ್ಳೇಅತ್ತಿಗುಪ್ಪೆಯ ಮಹದೇವಪ್ಪ ಎಂಬವರ ಮಕ್ಕಳಾದ ಚಂದನ್, ಕಾರ್ತಿಕ್ ಮತ್ತು ಮಲ್ಲಿಕಾರ್ಜುನ ಎಂಬವರ ಪುತ್ರ ರಿತೇಶ್ ಮೃತಪಟ್ಟವರು.
ಯಾರು ಇಲ್ಲದ ಸಮಯದಲ್ಲಿ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ತೋಟದ ಬಳಿ ಹೋದ ಮಹದೇವಪ್ಪ ಕೃಷಿ ಹೊಂಡದಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹ ಕಂಡು ಗಾಬರಿಗೊಂಡು ಕಿರುಚಿದ್ದಾರೆ. ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಮೃತದೇಹವನ್ನು ಮೇಲೆತ್ತಿದ್ದಾರೆ.
ಘಟನೆಯಿಂದ ನೊಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌. ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.