ಕೃಷಿ ಸಚಿವರ ಕಲರ್‌ಫುಲ್ ಕೃಷಿ

ಕೋಲಾರ,ಜ.೭: ಆತ ಸ್ಯಾಂಡಲ್‌ವುಡ್ ನಲ್ಲಿ ಕೌರವನಾಗಿದ್ದವರು ಈಗ ಸಚಿವರಾಗಿದ್ದಾರೆ. ಅದಕ್ಕಾಗಿನೆ ತಮಗೆ ಕೊಟ್ಟಿರುವ ಖಾತೆಯನ್ನೂ ಅವರು ಸಿನಿಮಾ ಕ್ಷೇತ್ರದಂತೆ ಕಲರ್ ಪುಲ್ ಮಾಡೋದಕ್ಕೆ ಹೊರಟಿದ್ದಾರೆ. ಅದಕ್ಕಾಗಿನೆ ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮ ಮಾಡಿ ಸಚಿವ ಮಾಡಿದ್ದೇನು ರೈತರಿಂದ ಸಚಿವರು ಕಲಿತರಾ ಇಲ್ಲಾ ರೈತರಿಗೆ ಕೃಷಿ ಮಾಡದನ್ನ ಕಲಿಸಿದರಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುವಂತೆ ಮಾಡಿದ್ದರು. ಕೃಷಿ ಸಚಿವರಜ ರಾಗಿ ಕಣದಲ್ಲಿ ನಿಂತು ರಾಶಿಪೂಜೆ ಮಾಡಿದರು, ಅಲ್ಲೇ ಹಸುನಿನಲ್ಲಿ ಹಾಲುಕರೆಯೋದಕ್ಕೆ ಟ್ರೈ ಮಾಡಿದರು, ಮತ್ತೊಂದೆಡೆ ಟೊಮ್ಯಾಟೋ ತೋಟದಲ್ಲಿ ಹಣ್ಣು ಬಿಡಿಸಿದರು, ಅಲ್ಲೇ ಟ್ರಾಕ್ಟರ್ ಹತ್ತಿ ಒಂದು ಸುತ್ತು ಹಾಕಿ, ಹೊಲದಲ್ಲಿ ಬಿತ್ತನೆ ಮಾಡಿ, ಹೊಲ ಉಳುಮೆ ಹೀಗೆ ಸಚಿವರು ಮಾಡಿದ ಕೆಲಸಾ ಒಂದಾ ಎರಡಾ , ಹೌದು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸಚಿವರು ಬೇವಹಳ್ಳಿ ಗ್ರಾಮದ ಅಶ್ವಥಮ್ಮ ಅನ್ನೋರ ಭೂಮಿಯಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ವೀಕ್ಷಣೆ ಮಾಡಿದರು.


ನಂತರ ಕಣದಲ್ಲಿ ರಾಶಿ ಪೂಜೆ ಮಾಡಿ, ಚಾಪರ್‌ನಿಂದ ಮೇವುಕತ್ತರಿಸಿ, ಹಸುವಿನಲ್ಲಿ ಹಾಲು ಕರೆದು, ಬೀಜ ಬಿತ್ತನೆ ಮಾಡಿ, ಗೊಬ್ಬರ ಹಾಕಿ, ಹೊಲ ಉಳುಮೆ ಮಾಡಿ ಬಿತ್ತನೆ ಮಾಡಿ, ಔಷದಿ ಸಿಂಪಡನೆ, ಟೊಮ್ಯಾಟೋ ಗಿಡ ನಾಟಿ ಮಾಡಿ, ಆಲೂಗಡ್ಡೆ ಬೀಜ ಬಿತ್ತನೆ ಹೀಗೆ ಹತ್ತಾರು ಪ್ರಯೋಗಗಳನ್ನು ಮಾಡಿದರು. ಈ ವೇಳೆ ಸಚಿವರು ಅಧಿಕಾರಿಗಳು, ಇದ್ದು ಸಚಿವರಿಗೆ ಸಾತ್ ನೀಡಿ ಇಂದಿನ ಕಾರ್ಯಕ್ರಮಕ್ಕೆ ಎರಡು ಮೂರು ದಿನದಿಂದ ತಯಾರಿಗಳನ್ನು ಮಾಡಿಕೊಂಡು ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮ ಮಾಡಿದರು ಆದರೆ ಇದರಿಂದ ಯಾರಿಗೆ ಏನು ಪ್ರಯೋಜನವಾಯ್ತು ಅನ್ನೋದು ಮಾತ್ರ ತಿಳಿಯಲಿಲ್ಲ. ಆದರೆ ಸಚಿವರು ಮಾತ್ರ ಇದು ರೈತರ ಬಳಿಗೆ ಸರ್ಕಾರವನ್ನು ತರುವ ಒಂದು ಮಹತ್ವದ ಯೋಜನೆ ಎಂದರು.
ಇನ್ನು ಇಡೀ ದಿನದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಕೇವಲ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಹೋದರು ಆದರೆ ಇಲ್ಲಿ ಯಾವ ರೈತರು ಇರಲಿಲ್ಲ, ಇನ್ನು ಸಚಿವರು ಬಂದಿರುವುದಕ್ಕೆ ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿ, ಬೇವಹಳ್ಳಿಯಲ್ಲಿ ಅದ್ದೂರಿಯಾದ ಅಲಂಕಾರ, ನೂರಾರು ಮಹಿಳೆಯರು ಕಳಶಹೊತ್ತು ಮೆರವಣಿಗೆ, ಎತ್ತಿನಗಾಡಿ ಮೆರವಣಿಗೆ, ಜಾನಪದ ಕಲಾ ತಂಡಗಳಿಂದ ಮೆರವಣಿಗೆ ಹೀಗೆ ಹಲವು ಕಾರ್ಯಕ್ರಮಗನ್ನು ಆಯೋಜನೆ ಮಾಡಿ ಇಡೀ ಕಾರ್ಯಕ್ರಮ ಕೇವಲ ಕೃಷಿ ಸಚಿವರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಿದ್ದವಾಗಿದ್ದ ರಂಗವೇದಿಯಂತೆ ಕಾಣುತ್ತಿತ್ತು. ಇನ್ನು ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಯಾರೊಬ್ಬರೂ ಸಾಮಾಜಿಕ ಅಂತರ ಇಲ್ಲದೆ,
ಮಾಸ್ಕ್ ಇಲ್ಲದೆ ಎಲ್ಲವನ್ನು ಮರೆತು ಸಚಿವರ ಗುಂಗಿನಲ್ಲಿ ಮುಳುಗಿ ಹೋಗಿದ್ದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡರು. ಇಷ್ಟಕ್ಕೆ ಕಾರ್ಯಕ್ರಮ ಮುಗಿದಿತ್ತು. ಇದೇ ವೇಳೆ ವೇದಿಕೆಯಲ್ಲಿದ್ದ ಮಾಲೂರು ಕಾಂಗ್ರೇಸ್ ಶಾಸಕ ಕೆ.ವೈ.ನಂಜೇಗೌಡ ಇದೊಂದು ದುಂದುವ್ಯಚ್ಚದ ಕಾರ್ಯಕ್ರಮ, ಇಂಥ ಕಾರ್ಯಕ್ರಮಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ
ಬದಲಾಗಿ ರೈತರಿಗೆ ಅನುಕೂಲಕರ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು
ಒಟ್ಟಾರೆ ಚಿತ್ರರಂಗದಲ್ಲಿ ಮಿಂಚಿದ್ದ ಸಚಿವ ಬಿ.ಸಿ.ಪಾಟೀಲರ ಈ ಕಾರ್ಯಕ್ರಮದಿಂದ ಯಾರಿಗೆ ಏನು ಅನುಕೂಲವಾಯ್ತು ಗೊತ್ತಿಲ್ಲ ಆದ್ರೆ ಸಚಿವರಿಗೆ ಮಾತ್ರ ರೈತರು ಮಾಡುವ ಕೆಲಸಗಳನ್ನು ಒಂದು ರಿಹರ್ಸಲ್? ಮಾಡೋದಕ್ಕೆ ಒಂದೊಳ್ಳೆ ವೇದಿಕೆ ಸಿಕ್ಕಂತಾಗಿದ್ದು
ಮಾತ್ರ ಸುಳ್ಳ, ಇದೆಲ್ಲದರ ಮದ್ಯೆ ಕೊನೆಗೂ ಉಳಿದು ಕೊಂಡ ಪ್ರಶ್ನೆ ಕೃಷಿ ಸಚಿವರು ರೈತರಿಂದ ಕೃಷಿ ಕಲಿತರಾ, ಇಲ್ಲಾ ಕೃಷಿ ಕಲಿಸಿಕೊಟ್ಟರಾ ಅನ್ನೋದು.