ಕೃಷಿ ಸಚಿವರಿಗೆ ಮನವಿ

ಮಾಯಕೊಂಡ.ಜೂ.೮; ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ರೈತರು ಭತ್ತ ಬೆಳೆಯನ್ನು ಬೆಳೆದಿದ್ದು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿದ ಬೆಲೆಗೆ ಖರೀದಿ ಮಾಡಲು  ಭತ್ತ ಖರೀದಿ ಕೇಂದ್ರಗಳನ್ನು ತುರ್ತಾಗಿ ತೆರೆಯುವಂತೆ ಕೋರಿ  ಕೃಷಿ ಸಚಿವರಾದ ಬಿ. ಸಿ. ಪಾಟೀಲ್ ಅವರಿಗೆ ಶಾಸಕ ಪ್ರೊ.ಲಿಂಗಣ್ಣ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ  ಜಿಲ್ಲೆಯ ಉಸ್ತುವಾರಿ ಸಚಿವರಾದ  ಭೈರತಿ ಬಸವರಾಜ್, ಸಂಸದ  ಜಿ. ಎಂ. ಸಿದ್ದೇಶ್ವರ್, ಶಾಸಕ  ಎಸ್. ಎ.ರವಿಂದ್ರನಾಥ್  ಉಪಸ್ಥಿತರಿದ್ದರು