ಕೃಷಿ-ಸಖಿ, ಪಶು-ಸಖಿ ಸದಸ್ಯರಿಗೆ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ

ಸಂಜೆವಾಣಿ ವಾರ್ತೆ
ದಾವಣಗೆರೆ; ಜ.೧೧ : ಕೃಷಿ ಸಖಿ, ಹೈನುಗಾರಿಕೆ ಸಖಿ, ವನ ಸಖಿ, ಬ್ಯಾಂಕ್ ವಹಿವಾಟು ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗಗಳ ಕುರಿತು ತರಬೇತಿ ಮೂಲಕ ಕೌಶಲ್ಯ ಪಡೆಯುವ ಮಹಿಳೆಯರು ಉದ್ಯೋಗ ಪಡೆದು ಅಭಿವೃದ್ಧಿ ಕಾಣುತ್ತಿರುವ ಹಳ್ಳಿ ಪ್ರದೇಶಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಮಹಿಳೆಯರು ನೆಮ್ಮದಿ ಮತ್ತು ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹೇಳಿದರು.ಅವರು  ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಎಂ.ಬಿ.ಕೆ, ಕೃಷಿ-ಸಖಿ, ಪಶು ಸಖಿ ಇವರಿಗೆ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು ನಮ್ಮ ಸಮಾಜದ ಬೆನ್ನಲುಬು ಕೃಷಿ ಮತ್ತು ಉಪ ಕಸುಬಾದ ಹೈನುಗಾರಿಕೆಯು ಗ್ರಾಮಾಂತರ ಕ್ಷೇತ್ರಗಳ ಜನರ ಜೀವನಕ್ಕೆ ಬೆಳಕಾಗಿದೆ. ಉದ್ಯೋಗಂ ಪುರುಷ ಲಕ್ಷಣಂ ಎಂಬ ಗಾದೆಯಂತೆ ಉದ್ಯೋಗಂ ಸ್ತ್ರೀ-ಪುರುಷ ಲಕ್ಷಣಂ ಎಂದು ಬದಲಾವಣೆ ಆಗಬೇಕೆಂದು ಮಾತುಗಳನ್ನು ಮುಂದುವರೆಸುತ್ತಾ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶಿಕ್ಷಣದಲ್ಲಿ ಕೌಶಲ್ಯದೊಂದಿಗೆ ಅಭಿವೃದ್ದಿ ಹಾಗೂ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈಗ ಪ್ರತಿಯೊಂದು ಕಾರ್ಯಕ್ರಮಗಳು ಮಹಿಳೆಯರ ಮುಂದಾಳತ್ವದಲ್ಲಿ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿದೆ. ಅಂಗನವಾಡಿ  ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನಮ್ಮ ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಒಂದು ಸೇತುವೆಯಾಗಿ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಕೃಷಿ,  ಪಶುಸಂಗೋಪಾಲನೆಯಲ್ಲಿ ಕೂಡ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ಕೃಷಿ-ಸಖಿ ಪಶು-ಸಖಿ ಉದ್ದೇಶವನ್ನು ತರಲಾಗಿದೆ ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ವನಸಖಿ ಮೂಕ ಪ್ರಾಣಿಗಳ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನಮ್ಮ-ನಿಮ್ಮ ಅದೃಷ್ಟ, ಹಾಗಾಗಿ ಸಣ್ಣ, ಅತೀ ಸಣ್ಣ ರೈತರಿಗೆ ಪಶು ಸಂಗೋಪನೆ ಬಗ್ಗೆ ಮಾಹಿತಿ ನೀಡಿಲು ಪಶು ಸಖಿಗಳು ಪಶು ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಗ್ರಾಮೀಣ ಭಾಗದ ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದರು. ಪ್ರಾಥಮಿಕ ಚಿಕಿತ್ಸೆ, ಪಶುಗಳ ಪೆÇೀಷಣೆ ಮತ್ತು ಪೌಷ್ಠಿಕ ಆಹಾರ, ಹೆಚ್ಚುವರಿ ಹಾಲಿನ ಉತ್ಪಾದನೆಯನ್ನು ತಿಳಿದುಕೊಳ್ಳಬೇಕು ಎಂದರು. ಪ್ರತಿಯೊಬ್ಬರು ತಮ್ಮ ಮನೆಯ ಸದಸ್ಯರನ್ನು ಆ್ಯಪ್‍ನಲ್ಲಿ ನೋಂದಾಯಿಸಿ ಅವರನ್ನು ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಕಾರ್ಡ್‍ಗೆ ಬದಲಾವಣೆ ಮಾಡಬೇಕೆಂದರು.ಸೆಲ್ಕೋ ಇಂಡಿಯಾದ ಡಿಜಿಎಂ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.