ಕೃಷಿ ಸಂಸ್ಕರಣ ಅಧ್ಯಕ್ಷರಾಗಿ ಬಸನಗೌಡ ನಾಡಂಗ

ಸಿಂಧನೂರು,ಆ.೨೨- ಕೃಷಿ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ತಾಲೂಕಾ ನೂತನ ಅಧ್ಯಕ್ಷರಾಗಿ ಬಸನಗೌಡ ನಾಡಂಗ ಆಯ್ಕೆಯಾದ್ದಾರೆ.ಸಂಘದ ಸದಸ್ಯರು ಸಭೆ ಮಾಡಿ ಬಸನಗೌಡ ನಾಡಂಗ ಇವರನ್ನು ಅಧ್ಯಕ್ಷರನ್ನಾಗಿ ತುರ್ವಿಹಾಳ ಬಸನಗೌಡ ಉಪಾಧ್ಯಕ್ಷರಾಗಿ ನಿರ್ದೇಶಕರಾಗಿ ಸಂಜಯ ಪಾಟೀಲ ಶಂಕರ ಗೌಡ, ರಾಜಶೇಖರ, ಶಿವಮೂರ್ತಯ್ಯ ಗೋವಿಂದ ರಾಜ, ಪ್ರತಿಭಾ ವೀರನಗೌಡ, ಸುಜಾತ ಗವಿಸಿದ್ದಪ್ಪ ಸಿಇಓ ಆಗಿ ಶರಣಬಸವ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಿಮ್ಮ ಕೃತಜ್ಞತೆಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವದಾಗಿ ನೂತನ ಅಧ್ಯಕ್ಷ ರಾದ ಬಸನಗೌಡ ನಾಡಂಗ ಮಾತನಾಡಿದರು.