ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ: ಭತ್ತದ ಬೆಳೆ ಪರಿಶೀಲನೆ

ಸಂಜೆವಾಣಿ ವಾರ್ತೆ
ಮಾನ್ವಿ.ಫೆ.೦೯- ಮಾನ್ವಿ ಮತ್ತು ಸಿರವಾರ ತಾಲೂಕಿನ ಕೆ.ಗುಡದಿನ್ನಿ, ಜಂಬಲದಿನ್ನಿ, ನವಲಕಲ್, ಲಕ್ಕಂದಿನ್ನಿ, ರಬಣಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ಬೇಸಿಗೆ ಹಂಗಾಮಿನ ಭತ್ತದ ಪೈರು ಒಣಗುತ್ತಿರುವ ಹಿನ್ನೆಲ್ಲೆಯಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಅಧ್ಯಾಯನ ನಡೆಸಿದರು.
ತಾಲೂಕಿನ ರಬಣಕಲ್ ಗ್ರಾಮದ ನರಸಪ್ಪ ರವರ ಜಮೀನಿನಲ್ಲಿ ಭತ್ತದ ಬೆಳೆಯನ್ನು ಪರೀಶಿಲಿಸಿ ಕೃಷಿ ವಿಶ್ವವಿದ್ಯಾಲಯದ ಡಾ.ಉಮೇಶ.ಎಂ.ಆರ್.ಮಾತನಾಡಿ, ತುಂಗಭದ್ರ ಜಲಾಶಯದ ಕಾಲುವೆ ನೀರನ್ನು ಬಳಸಿ ಈ ಭಾಗದಲ್ಲಿ ನಿರಂತರವಾಗಿ ಎಕ ಬೆಳೆ ಪದ್ದತಿ ಅಡಿಯಲ್ಲಿ ಭತ್ತವನ್ನು ಮಾತ್ರ ಬೆಳೆಯುತ್ತಿದ್ದಾರೆ ಈ ಬಾರಿ ಬೇಸಿಗೆಯಲ್ಲಿ ಕಾಲುವೆ ನೀರು ದೊರೆಯದೆ ಇರುವುದರಿಂದ ರೈತರು ಕೊಳವೆ ಬಾವಿ ನೀರನ್ನು ಬಳಸಿ ಭತ್ತವನ್ನು ಬೆಳೆದಿದ್ದು ಭತ್ತದ ಬೆಳೆ ೨ ತಿಂಗಳಿನದಾಗಿದ್ದು, ಬೆಳೆ ಒಣಗುತ್ತಿರುವುದಕ್ಕೆ ಕೊಳವೆ ಬಾವಿಯಲ್ಲಿ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗಿ ಕ್ಷಾರ ಗುಣ ಹೊಂದಿರುವುದು ಹಾಗೂ ನಿರಂತರವಾಗಿ ಕೋಳವೆ ಬಾವಿಯ ನೀರನ್ನು ಜಮೀನಿಗೆ ಬಿಡುತ್ತಿರುವುದರಿಂದ ಉಪ್ಪಿನ ಅಂಶ ಹೆಚ್ಚಗಿರುವುದರಿಂದ ಹಾಗೂ ಕೆವಲ ರಾಸಾಯನಿಕ ಗೋಬ್ಬರವನ್ನು ಮಾತ್ರ ಬಳಕ್ಕೆ ಮಾಡುತ್ತಿರುವುದು ಕೋಟ್ಟಿಗೆಯ ಗೋಬ್ಬರ ಬಳಸದೆ ಇರುವುದರಿಂದ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗುತ್ತಿರುವುದರಿಂದ ಭತ್ತದ ಬೆಳೆಗೆ ಪ್ರಧಾನ ಪೋಷಕಾಂಶದ ಜೊತೆಗೆ ೧೬ ಉಪಪೋಷಕಾಂಶಗಳು ದೊರೆಯದೆ ಇರುವುದರಿಂದ ಮಣ್ಣಿನ ಪಲವತ್ತತೆ ಕಾಡಿಮೆಯಾಗುತ್ತಿದ್ದು ಭತ್ತದ ಪೈರು ಒಣಗುತ್ತಿವೆ ರೈತರು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಿ ಹಸಿರೆಲೆ ಗೋಬ್ಬರ ನೀಡುವ ಬೆಳೆಗಳಾದ ಹೆಸರು,ಅಲಸಂದಿ, ಬೆಳೆಗಳನ್ನು ಬೆಳೆದು ಮಣ್ಣಿನಲ್ಲಿ ಸೇರಿಸುವುದರಿಂದ ಮಣ್ಣಿನ ರಚನೆಯಲ್ಲಿ ಸುಧಾರಣೆ ಯಾಗುತ್ತದೆ ಬೇಸಿಗೆಯಲ್ಲಿ ಕಾಲುವೆ ನೀರು ಹಾಗೂ ಮಳೆ ಬರದೆ ಇದ್ದಗ ನಿರಂತರವಾಗಿ ಭತ್ತವನ್ನು ಬೆಳೆಯದೆ ಬೆಳೆ ಪರಿವರ್ತನೆಗಾಗಿ ತೋಗರಿ,ಜೊಳ, ಸಜ್ಜೆ,ಶೇಂಗ, ಹತ್ತಿ, ಕಡ್ಲೆ ಬೆಳೆಗಳನ್ನು ಬೆಳೆಯುವುದರಿಂದ ಹಾಗೂ ಹೆಚ್ಚು ಸಾವಯವ ಪದಾರ್ಥಗಳಾದ ಎರೆಹುಳು ಗೋಬ್ಬರ, ತಿಪ್ಪೆಗೊಬ್ಬರವನ್ನು ಜಮೀನಿಗೆ ನೀಡಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಡಾ.ಅಜೀತ್ ಕುಮಾರ, ಸಸ್ಯ ಕ್ರೀಯ ಶಾಸತ್ರಜ್ಞರಾದ ಡಾ.ಮುಖೇಶ್ ಹಾಗೂ ತಾಲೂಕು ಸಾಹಯಕ ಕೃಷಿ ನಿರ್ದೇಶಕರಾದ ಹುಸೇನ್ ಸಾಹೇಬ್, ಕೃಷಿ ಅಧಿಕಾರಿ ವೆಂಕಣ್ಣ ಯಾದವ್ ಸೇರಿದಂತೆ ಇನ್ನಿತರರು ಇದ್ದರು.