ಕೃಷಿ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಕೃಷಿ ಸಚಿವರುಗಳೊಂದಿಗೆ ಸದಸ್ಯರ ಚರ್ಚೆ.

   

ಧಾರವಾಡ ಮಾ.31-ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ವ್ಯವಸ್ಥಾಪನ ಮಂಡಳಿಯ ಸದಸ್ಯರುಗಳಾದ ಬಸವರಾಜ ಪಾಟೀಲ, ಶಶಿಮೌಳಿ ಕುಲಕರ್ಣಿ, ಯಲ್ಲನಗೌಡಎನ್. ಪಾಟೀಲ, ಮಲ್ಲೇಶ ಪಿ. ಮತ್ತು ಎನ್. ಎಸ್. ಅಜಗಣ್ಣವರ ಇವರು ಕೃಷಿ ಸಚಿವರು, ಸರ್ಕಾರ ಕರ್ನಾಟಕ ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕೃಷಿ ಇಲಾಖೆ, ಬೆಂಗಳೂರು ಇವರನ್ನು ಭೇಟಿ ಮಾಡಿ ಕೃಷಿ ವಿಶ್ವವಿದ್ಯಾಲಯಧಾರವಾಡದಲ್ಲಿ ಬ್ಯಾಕಲಾಗ್ ನೇರ ನೇಮಕಾತಿಯಡಿ ಖಾಲಿ ಇರುವ ಹುದ್ದೆಗಳನ್ನು ಜಾಹೀರುಪಡಿಸಲು, ಖಾಲಿ ಇರುವ ಇತರೆ ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವ ಕುರಿತು, ಸಹಾಯಕ-ಕಂ-ಕಂಪ್ಯೂಟರ ಆಪರೇಟರ (ಸಿ ದರ್ಜೆ) ಸೇವಾ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದು, ಕೃಷಿ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಅನುದಾನ ನೀಡುವುದು ಹಾಗೂ ಪಿಂಚಣಿ ಹಣ ಬಿಡುಗಡೆ ಮಾಡುವುದು ಮತ್ತು ಎಲ್ಲ ಕೃಷಿ ಸಂಶೋಧನಾ ಕೇಂದ್ರಗಳಿಗೆ ಹಾಗೂ ಕೃಷಿ ವಿಶ್ವವಿದ್ಯಾಲಯ ಮುಖ್ಯ ಆವರಣಕ್ಕೆ ಕಂಪೌಂಡ ಕಟ್ಟಲು ಸರಕಾರದಿಂದ ಹಣ ಮಂಜೂರು ಮಾಡಿಕೊಳ್ಳುವ ಕುರಿತು ಮನವಿ ಮಾಡಿದರು ಹಾಗೂ ಸನ್ಮಾನ್ಯ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಕೃಷಿ ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.