ಕೃಷಿ ವಿಶ್ವವಿದ್ಯಾಲಯದಲ್ಲಿ ಡಾ.ಅಂಬೇಡ್ಕರ ಜಯಂತಿ ಆಚರಣೆ

ವಿಜಯಪುರ, ಎ.15-ಡಾ. ಬಿ. ಆರ್. ಅಂಬೇಡ್ಕರ ರವರ 130 ನೇ ಜಯಂತೋತ್ಸವವನ್ನು ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಕೃಷಿ. ವಿ.ವಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ. ಮಲ್ಲೇಶಿ, ಮಾತನಾಡುತ್ತಾ, ಡಾ.ಬಿ.ಆರ್. ಅಂಬೇಡ್ಕರ ರವರು ಮಹಾ ಮಾನವತಾವಾದಿ ಸಮನ್ವತೆಯ ಹರಿಕಾರ ಅವರ ತತ್ವಾದರ್ಶಗಳು ಎಲ್ಲರಿಗೂ ಅನುಕರಣೀಯ. ಅವರು ಭಗವಾನ ಬುದ್ದರ ಅನುಯಾಯಿಗಳಾಗಿ ಅಹಿಂಸಾ ಧರ್ಮ ಪಾಲಿಸಿದವರು ಹಾಗೂ ಎಲ್ಲರೂ ಕ್ರೋದ, ಮತ್ಸರ, ತೊರೆಯಲು ಕಾರಣೀಕರ್ತರು, ಡಾ. ಬಿ.ಆರ್. ಅಂಬೇಡ್ಕರ ರವರು ಮಹಿಳಾ ಸಮಾನತೆಗಾಗಿ ವಿಶೇಷವಾಗಿ ಶ್ರಮಿಸಿದರು. ಅದರ ಫಲವಾಗಿ ಇಂದು ಎಲ್ಲ ರಂಗಗಳಲ್ಲಿ ಮಹಿಳಾ ಸಬಲೀಕರಣ ಪ್ರತಿಫಲವನ್ನು ಕಾಣುತ್ತಿದ್ದೇವೆ ಹಾಗೂ ನಾನು ಈ ವೇದಿಕೆಯಲ್ಲಿ ಆಸೀನರಾಗಲು ಡಾ. ಬಿ. ಆರ್. ಅಂಬೇಡ್ಕರ ಅವರೇ ಕಾರಣ ಎಂದರು.
ಅತಿಥಿ ಸ್ಥಾನ ವಹಿಸಿದ ಸಹ ಸಂಶೋಧನಾ ನಿರ್ದೇಶಕ, ಡಾ. ಅಶೋಕ ಎಸ್. ಸಜ್ಜನ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ ರವರು ಬಹಳ ಬಡತನ ಬೆಗೆಯಲ್ಲಿ ಬೆಂದು ಅಪಮಾನಗಳನ್ನು ಸಹಿಸಿ ಅದನ್ನು ಸವಾಲಾಗಿ ಸ್ವೀಕರಿಸಿ ಜ್ಞಾನಾರ್ಜನೆಯೇ ಇದಕ್ಕೆಲ್ಲ ಪರಿಹಾರವೆಂಬಂತೆ ಈ ಜಗತ್ತಿನಲ್ಲಿಯೇ ಅತ್ಯುನ್ನತವಾದ ಪದವಿಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಶಿಕ್ಷಣ, ಸಂಘಟನೆ ಹೋರಾಟದ ಮೂಲಕ ಎಲ್ಲರಿಗೂ ಸಮಾನತೆ, ಬದುಕುವ ಸ್ವಾತಂತ್ರ್ಯದ ಮಹತ್ವ ಸಾರಿದರು. ಸಂವಿಧಾನದ ಸಮಿತಿ ಅಧ್ಯಕ್ಷರಾಗಿ ಜಗತ್ತಿನಲ್ಲಿರುವ ಎಲ್ಲ ಸಂವಿಧಾನ ಅಭ್ಯಸಿಸಿ ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ ರವರೇ ಹೇಳಿರುವಂತೆ “ನಾನು ಕೇವಲ ಒಂದೆ ಜಾತಿ ಅಥವಾ ಜನಾಂಗಕ್ಕೋಸ್ಕರ ಕೆಲಸ ಮಾಡಿಲ್ಲ ಬದಲಾಗಿ ಭಾರತದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವಿಸಿದ್ದೇನೆ, ಸಂಶಯವಿದ್ದರೆ ಬೇಕಾದರೆ ಸಂವಿಧಾನ ಓದಿಕೊಳ್ಳಿ” ಎಂದು ಹೇಳಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಶ್ರೀಕಾಂತ ಚವ್ಹಾಣ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ರವರು ಹೋರಾಟ ಮತ್ತು ಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಅವರ ತತ್ವ, ಆದರ್ಶ ಎಲ್ಲರಿಗೂ ಅನುಕರಣಿಯವಾಗಲಿ ಎಂಬ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ಮಾತನಾಡುತ್ತಾ, ಸಮಾನತೆ ಎನ್ನುವುದು ಅಕ್ಷರದಲ್ಲಿ ಇರದೇ ಎಲ್ಲರ ಮನಸ್ಸಿನಲ್ಲಿ ಬಂದರೆ ಭಾರತ ದೇಶದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯವಿದೆ ಎಂದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಜರಿದ್ದು, ಸ್ನಾತಕೋತ್ತರ ವಿಧ್ಯಾರ್ಥಿಯಾದ ಕುಮಾರ ಮೇಘರಾಜ ಮೈಸೂರೆ, ಡಾ. ಬಿ.ಆರ್. ಅಂಬೇಡ್ಕರ ರವರ ಬಗ್ಗೆ ಕವನ ರಚಿಸಿ ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯ, ವಿದ್ಯಾಧಿಕಾರಿ, ಡಾ. ಎಸ್.ಬಿ. ಕಲಘಟಗಿ, ಮಾತನಾಡಿ, ದೇಶದೆಲ್ಲೆಡೆ ಕರೋನಾ ಹಾವಳಿಯಿಂದ ಲಾಕ್‍ಡೌನ್ ನಡುವೆಯಲ್ಲಿಯೂ ಕೃಷಿ ಕಾಲೇಜ ಸಿಬ್ಬಂದಿಗಳು ಡಾ. ಬಿ.ಆರ್. ಅಂಬೇಡ್ಕರ ಜಯಂತಿಯಲ್ಲಿ ಭಾಗವಹಿಸಿದ್ದು ವಿಶೇಷ ಹಾಗೂ ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿಕ್ಷಕವೃಂದ ಡಾ. ಎ.ಪಿ. ಬಿರಾದಾರ, ಡಾ. ಜಗ್ಗಿನವರ, ಡಾ. ಶ್ರೀನಿವಾಸಲು, ಡಾ. ಚಂದ್ರಕಾಂತ ಸೋರೆಗಾಂವ್, ಡಾ. ಶಿವಲಿಂಗಪ್ಪ ಹೋಟಕರ, ಡಾ. ಕಿರಣ ಅಲ್ಲದೇ, ಶಿಕ್ಷಕೇತರ ಸಿಬ್ಬಂದಿಗಳಾದ ತುಕಾರಾಮ ಚಲವಾದಿ, ಸಂಜೀವಕುಮಾರ ಕೊಂಡಗೂಳಿ, ಬಿ.ಜಿ. ಬಿರಾದಾರ, ಹನಮಂತ ಸಾಲಹಳ್ಳಿ, ರಮೇಶ ಗೊಣಗೇರಿ, ಇತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ. ತುಕಾರಾಮ ಚಲವಾದಿ ನಿರೂಪಣೆ ಜೊತೆಗೆ ವಂದನಾರ್ಪಣೆ ನಿರ್ವಹಿಸಿದರು.