ಕೃಷಿ ವಿವಿ ನಿಯಮನುಸಾರ ಅಭ್ಯರ್ಥಿ ಆಯ್ಕೆಗೆ ಮನವಿ

ರಾಯಚೂರು, ಮಾ.೨೩- ಕೃಷಿ ವಿಶ್ವವಿದ್ಯಾಲಯ ಸಹಾಯಕ ಹುದ್ದೆಯ ಆಯ್ಕೆಯ ಸೇವಾ ಅನುಭವದ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿ ನಡೆದಿದ್ದು
ಸದರಿ ಆಯ್ಕೆ ವಿಧಾನವನ್ನು ಕೈಬಿಟ್ಟು, ನಿಯಮನುಸಾರ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೂ ನ್ಯಾಯ ಒದಗಿಸುವಂತೆ ಅಭ್ಯರ್ಥಿ ಶ್ರೀನಿವಾಸ್ ಡಿ ಅವರು ಉಪಕುಲಪತಿ ಅವರಿಗೆ ಮನವಿ ಸಲ್ಲಿಸಿದರು.ಕೃಷಿ ವಿಶ್ವವಿದ್ಯಾಲಯವು ನ.೪ ೨೦೧೫ ರಂದು ೩೯ ಸಹಾಯಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿ, ಅಧಿಸೂಚನೆಯನ್ನು ಹೊರಡಿಸಿದೆ.ಮುಂದುವರೆದ ಸದರಿ ವಿಶ್ವವಿದ್ಯಾಲಯವು ನೇಮಕಾತಿ ಅಧಿಸೂಚನೆಯಲ್ಲಿನ ಸಹಾಯಕ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿನ ಸೇವಾನುಭಕ್ಕೆ ಸಂಬಂಧಿಸಿದಂತೆ ಲಿಖಿತ ದೂರು ನೀಡಿದ್ದರಿಂದಾಗಿ ಏ.೧೧,೨೦೧೬ ರಂದು ತಿದ್ದುಪಡಿ ಮಾಡಿ ನೇಮಕಾತಿ ಅಧಿಸೂಚನೆಯನ್ನು ಮತ್ತೊಮ್ಮೆ ಹೊರಡಿಸಿ ಅರ್ಜಿ ಅಹ್ವಾನಿಸಿದ್ದು ಇರುತ್ತದೆ.
ನಂತರ ಸದರಿ ವಿಶ್ವವಿದ್ಯಾಲಯವು ಸಹಾಯಕ ಹುದ್ದೆಗೆ ಏ. ೨೮, ೨೦೧೭ ರಂದು ಪರೀಕ್ಷೆಯನ್ನು ನಡೆಸಿದ್ದು ಇರುತ್ತದೆ. ಸದರಿ ಪರೀಕ್ಷೆಯ ಫಲಿತಾಂಶವನ್ನು ಬಹಳ ಬಹಳ ತಡ ೬ ವರ್ಷಗಳ ನಂತರ ಮಾ.೧೩, ೨೦೨೩ ರಂದು ಪ್ರಕಟಗೊಂಡಿದೆ.
ಆದರೆ ವಿಶ್ವವಿದ್ಯಾಲಯವು ಆಯ್ಕೆ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಸ್ಕೋರ್ ಕಾರ್ಡಗೆ ಸಂಬಂಧಿಸಿದ ಉಲ್ಲೇಖಿತ ೨ರ ರಲ್ಲಿನ ಸಹಾಯಕ ಹುದ್ದೆಗೆ ನಿಗದಿಪಡಿಸಿದ ಕ್ರಮ ಸಂಖ್ಯೆ (೪) ರಲ್ಲಿ ತಿಳಿಸಿರುವಂತೆ ಸೇವಾ ಅನುಭವನ್ನು ಪರಿಗಣನೆಗೆ ತೆಗೆದುಕೊಂಡು ಸೇವಾ ಅನುಭವದ ಒಂದು ವರ್ಷಕ್ಕೆ ೧ ಅಂಕಗಳಂತೆ ೧೦ ವರ್ಷಗಳಿಗೆ ಅಂಕಗಳು ಎಂದು ಪರಿಗಣಿಸಿ ಅಯ್ಕೆಪಟ್ಟಿಯನ್ನು ೧೦ ತಯಾರಿಸಿದ್ದೇಯಾದಲ್ಲಿ, ವಿಶ್ವವಿದ್ಯಾಲಯವೇ ಹೊರಡಿಸಿದ ಉಲ್ಲೇಖ (೩) ಅಧಿಸೂಚನೆಯ ನಿಯಮವನ್ನು ಮೀರಿದಂತಾಗುತ್ತದೆ. ಅಲ್ಲದೇ ಅರ್ಜಿ ಸಲ್ಲಿಸಿದ ಸಾಮಾನ್ಯ ಅಭ್ಯರ್ಥಿಗಳ ಅಂಕಗಳಲ್ಲೂ ಭಾರಿ ವ್ಯತ್ಯಾಸವಾಗಿ ಸದರಿ ಅಭ್ಯರ್ಥಿಗಳಿಗೆ ತುಂಬಾ ಅನ್ಯಾಯವಾದಂತಾಗುತ್ತದೆ.
ಸೇವಾ ಅನುಭವ ವಿಧಾನವನ್ನು ಕೈಬಿಟ್ಟು. ನಿಯಮದಂತೆ ಅರ್ಜಿ ಎಲ್ಲ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಅನ್ಯಾಯವಾಗದಂತೆ ಹಾಗೂ ನ್ಯಾಯ ಬದ್ದವಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿದರು.