ಕೃಷಿ ವಿವಿ – ನಾಲ್ವರಿಗೆ ಪ್ರಶಸ್ತಿ

ರಾಯಚೂರು.ಮಾ.೨೩- ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟಿಡ್ ಸ್ವರಾಜ್ ವಿಭಾಗದ ಮೇರಾ ಸ್ವರಾಜ್ ಶಿಕ್ಷಣ ನೆರವು ಪ್ರಶಸ್ತಿ ಕೃಷಿ ವಿಶ್ವವಿದ್ಯಾಲಯ ನಾಲ್ವರು ವಿದ್ಯಾರ್ಥಿಗಳಿಗೆ ಲಭಿಸಿದೆ.
ಮೇರಾ ಸ್ವರಾಜ್ ಶಿಕ್ಷಣ ನೆರವು ಪ್ರಶಸ್ತಿ ಅಂಗವಾಗಿ ದೇಶಾದ್ಯಂತ ಅಂತರ್ಜಾಲ ಮೌಖಿಕ ಪ್ರಶ್ನೆ ನಡೆಸಿ, ಅದರಲ್ಲಿ ಉತ್ತಮ ಅಂಕ ಪಡೆದವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಶರಣಬಸವ, ಕುರುಣಾ ಸಂಗಪ್ಪ, ಸಂಜನಾ ಎನ್, ಶ್ರಮೋದ್ ಇವರಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯೂ ೯೫ ಸಾವಿರ ನಗದು ಬಹುಮಾನ ಹೊಂದಿರುತ್ತದೆ. ಈ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಕೆ.ಎನ್.ಕಟ್ಟಿಮನಿ, ಶಿಕ್ಷಣ ನಿರ್ದೇಶಕರಾದ ಡಾ.ಎಂ.ಜಿ.ಪಾಟೀಲ್, ಡಾ.ಎಂ.ನೇಮಿಚಂದ್ರಪ್ಪ, ಡಾ.ಎಂ.ವೀರನಗೌಡ ಅವರು ಪ್ರಶಸ್ತಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಯ ನೋಡಲ್ ಅಧಿಕಾರಿಯಾದ ಡಾ.ಶರಣಗೌಡ ಹಿರೇಗೌಡರ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.