ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ವಿಜ್ಞಾನಿಗಳಿಂದ ಜಮೀನಿಗೆ ಭೇಟಿ

ಕಲಬುರಗಿ:ಸೆ.5: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ, ನಿರಗುಡಿ, ಮಟಕಿ, ತೀರ್ಥ ಮತ್ತು ಕಿಣ್ಣಿ ಸುಲ್ತಾನ್ ಗ್ರಾಮಗಳಲ್ಲಿ ಬೆಳೆದ ತೊಗರಿ, ಸೋಯಾ ಅವರೆ, ಸೂರ್ಯಕಾಂತಿ, ಮೆಕ್ಕೆಜೋಳ, ಬಾಳೆ, ಪೇರಲ, ಕಬ್ಬು, ಸೀತಾಫಲ, ಟೋಮ್ಯಾಟೋ, ಈರುಳ್ಳಿ, ಬದನೆಕಾಯಿ, ಮೆಣಸಿನಕಾಯಿ ಮತ್ತು ಚೆಂಡು ಹೂ ಮುಂತಾದ ಬೆಳೆಗಳ ಜಮೀನಿಗೆ ಐಸಿಎಆರ್-ಕೃಷಿ ಕೇಂದ್ರ, ಕಲಬುರಗಿಯ ತೋಟಗಾರಿಕೆ ವಿಜ್ಞಾನಿಗಳಾದ ಡಾ. ವಾಸುದೇವ್ ನಾಯ್ಕ್ ಹಾಗೂ ಡಾ. ಶ್ರೀನಿವಾಸ ಬಿ.ವಿ, ಮಣ್ಣು ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ ನಂತರ ರೈತರಿಗೆ ಪ್ರಸಕ್ತ ಸನ್ನಿವೇಶದಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಮಾಹಿತಿಗಳನ್ನು ನೀಡಿದರು. ಅಧಿಕ ಮಳೆಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಜೊತೆಗೆ ರೋಗ ಮತ್ತು ಹುಳುವಿನ ಭಾದೆ ಕಂಡುಬರುತ್ತಿದೆ. ಅಲ್ಲದೆ ತೋಟಗಾರಿಕಾ ಬೆಳೆಗಳಲ್ಲಿ ವಾರ್ಷಿಕ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಆಳಂದ ರಸ್ತೆ, ಕಲಬುರಗಿಗೆ ಸಂಪರ್ಕಿಸುವಂತೆ ತಿಳಿಸಿದರು. ರೈತರಾದ ಸಿದ್ರಾಮಪ್ಪಾ ಕೋರೆ, ಸಿದ್ರಾಮ ಮೂಲಗೆ, ಕಾಶಿನಾಥ ಮತ್ತು ತಿಪ್ಪಣ್ಣಾ ಸಿದ್ದಾರೂಢ ಡೋಣಿ, ದೇವಿಂದ್ರ, ನಾಗರಾಜ, ಸೈಬಣ್ಣಾ ಕೊರಳ್ಳಿ ಮತ್ತು ಗಣೇಶ ಹಾಗೂ ನಿರಂಜನ್ ಧನ್ನಿ ಇತರರು ಭೇಟಿ ನೀಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದರು.