ರಾಜ್ಯಪಾಲರಿಂದ ಪದವಿ,ಪದಕಗಳ ಪ್ರದಾನ
ಕೃಷಿ ಅಭಿವೃದ್ಧಿಯೇ ದೇಶ ಅಭಿವೃದ್ಧಿ
ರಾಯಚೂರು,ಜು.೨೮- ಕೃಷಿ ಮಳೆದಾರಿತವಾಗಿದ್ದು,ಕೃಷಿ ಅಭಿವೃದ್ದಿ ದೇಶದ ಅಭಿವೃದ್ದಿ ಎಂದು ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರಿಂದು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾಗಳ ಮಹಾವಿದ್ಯಾಲಯದ ೧೨ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,ಭಾರತ ದೇಶವು ಕೃಷಿ ಪ್ರಧಾನವಾಗಿದ್ದು,ಆದರೆ ಕೃಷಿಯ ಮಳೆದಾರಿತವಾಗಿರುವುದರಿಂದ ಅಭಿವೃದ್ದಿ ಪಡಿಸಲಿಕೆ ಪದವಿ ಪಡೆದವರು ರೈತರೊಂದಿಗೆ ಕೈಜೋಡಿಸುವ ಮೂಲಕ ನಿಮ್ಮ,ದೇಶ,ರೈತರ ಹಿತವನ್ನು ಕಾಪಾಡುವುದಕ್ಕೆ ಈ ಪದವಿಯನ್ನು ಬಳಸಿಕೊಳ್ಳಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯವು ಭಾರತದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.ಪದವಿ ಪಡೆದುಕೊಂಡವರ ಭವಿಷ್ಯ ಉಜ್ಜಾಲವಾಗಲಿದೆ ಎಂದ ಅವರು,ನಮ್ಮ ಕೃಷಿ ನಮ್ಮ ದೇಶದ ಅರ್ಥ ವ್ಯವಸ್ಥೆ ಕೃಷಿಯನ್ನು ಅಭಿವೃದ್ದಿಯನ್ನು ಅವಲಂಭಿಸಿದೆ.ಕೃಷಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ದಿ ಪಡಿಸುವಲ್ಲಿ ಗಮನ ಹರಿಸುತ್ತಿದೆ ಎಂದರು.
ನಮ್ಮಲ್ಲಿ ಮಳೆ ಆಧಾರಿತ ಇದ್ದರು ಕೂಡ ನಮಗಿಂತಲೂ ಕೇವಲ ೧೦ ಪರಸೇಂಟ್ ಮಳೆ ಬೀಳುವ ಇಸ್ರೇಲ್ ಇಡೀ ಜಗತ್ತಿನಲ್ಲಿ ಕೃಷಿ ಉತ್ಪನ್ನದಲ್ಲಿ ಅಗ್ರಗಣ್ಯ ದೇಶವಾಗಿದೆ.ಕೃಷಿ ಉಪ ಕಸಬುಗಳನ್ನು ಕೂಡ ಮೈಗೂಡಿಸಿಕೊಳ್ಳಬೇಕು.ನಮ್ಮ ದೇಶ ಆರ್ಥಿಕ ವ್ಯವಸ್ಥೆಯಲ್ಲಿ ೫ನೇ ಸ್ಥಾನದಲ್ಲಿದೆ.೩ ನೇ ಸ್ಥಾನಕ್ಕೆ ಏರಿಸುವ ಸಂಕಲ್ಪ ನಾವೆಲ್ಲರೂ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಣೆ ಮಾಡಿದರು.
ನಂತರ ಘಟಿಕೋತ್ಸವ ಭಾಷಣವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕ ಡಾ.ಹಿಮಾಂಶು ಪಾಠಕ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ, ವಿಶ್ವ ವಿದ್ಯಾಲಯ ಕುಲಸಚಿವ ಡಾ.ಎಂ.ವೀರನಗೌಡ, ಶಿಕ್ಷಣ ನಿರ್ದೇಶಕ ಡಾ.ಎಂ. ಜಿ.ಪಾಟೀಲ್, ಸಂಶೋದನಾ ನಿರ್ದೇಶಕ ಡಾ. ಬಿ.ಕೆ.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.