ಕೃಷಿ ವಿಕಾಸ ಯೋಜನೆಯಡಿ ಕಾರ್ಯಕ್ರಮ

ಲಿಂಗಸೂಗೂರ,ಮೇ.೨೪-
ತಾಲೂಕಿನ ಮಾವಿನಭಾವಿಯಲ್ಲಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೇಡಿಯಲ್ಲಿ ರೈತ ಸಂಪರ್ಕಗಳ ಕೇಂದ್ರಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಹಾಗೂ ಕೃಷಿ ವಿಸ್ತರಣೆ ಬಲವರ್ಧನ ಸಭೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಮಾತನಾಡಿ, ೨೦೨೩-೨೪ನೇ ಸಾಲಿನ ಮುಂಗಾರು ಅಂಗಾಮಿನ ಬಿಜೋಪಚಾರ ಮತ್ತು ಪಿಎಂ ಕಿಸಾನ್ ಯೋಜನೇಡಿಯಲ್ಲಿ ಹಾಗೂ ಇಕೆವೈಸಿಯ ಬಗ್ಗೆ ಮತ್ತು ತೊಗರಿಯಲ್ಲಿ ಕುಡಿ ಚುಟುವುದು ಮತ್ತು ಮಿಶ್ರ ಬೆಳೆ ಪದ್ದತಿ ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾ, ರೈತರಿಗೆ ಕೃಷಿ ಇಲಾಖೆಯ ಯೋಜನೆಗಳು ಹಾಗೂ ಕೃಷಿ ತಾಂತ್ರಿಕತೆಗಳ ಬಗ್ಗೆ ತರಬೇತಿ ಜಾಗೃತಿ ಕಾರ್ಯಕ್ರಮದಲ್ಲಿ ಬೆಳೆ ಸಮೀಕ್ಷೆ ಯಾಪ್, ರೈತರಿಗೆ ಪಹಣಿಗೆ ಆಧಾರ ಜೋಡನೆ, ಬಿಜೋಪಚಾರ ಆಂದೋಲನ, ಪ್ರಧಾನಮಂತ್ರಿ ಪಸಲ್ ಭೀಮ್ ಯೋಜನೆ, ಯೂರಿಯಾ ರಸ ಗೊಬ್ಬರ ಮೀತ ಬಳಕೆಯಿಂದಾಗುವ ಲಾಭಗಳು, ಸಮಗ್ರ ಪಿಡೆ ನಿವಾರಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ರೈತರು ಹೊಸ ಕಂತಿಗಾಗಿ ಇದೆ ತಿಂಗಳು ೨೫ ತಾರೀಕಿನ ಒಳಗಡೆ ಇಕೆವೈಸಿ ಮಾಡಿಸಬೇಕು, ಇದನ್ನು ಗ್ರಾಮೀಣ ಪ್ರದೇಶದಲ್ಲಿರುವ ಸಿಎಸ್ ಸಿ ಸೆಂಟರ್, ಗ್ರಾಮ್ ಒನ್ ಕೇಂದ್ರ, ಬ್ಯಾಂಕ್, ಪೋಸ್ಟ್ ಆಫೀಸ್, ಕರ್ನಾಟಕ ಒನ್ ಕೇಂದ್ರದಲ್ಲಿ ಈಗಾಗಲೇ ನೋಂದಣಿಯಾದ ಮೊಬೈಲ್ ನಂಬರ್ ಮೂಲಕ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು ಇಲ್ಲವಾದರೆ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಡಾ. ವಾಣಿಶ್ರೀ, ಡಾ. ಅರವಿಂದ್, ಡಾ.ರೇಣುಕಾ, ರಾಜೇಶ್ ಪಾಟೀಲ್ ಹಾಗೂ ರೈತರು ಇನ್ನಿತರರು ಇದ್ದರು.