ಕೃಷಿ ರಾಷ್ಟ್ರೀಯ ಕಾರ್ಯಗಾರದ ಕೈಪಿಡಿ ಬಿಡುಗಡೆ

ಬೆಂಗಳೂರು,ಮೇ೩:ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸುಸ್ಥಿರ ಅಭಿವೃದ್ಧಿಗಾಗಿ ದ್ವಿತೀಯ ಕೃಷಿ ವಿಸ್ತರಣಾ ತಂತ್ರಜ್ಞಾನಗಳು” ಕುರಿತು ರಾಷ್ಟ್ರೀಯ ಕಾರ್ಯಗಾರವನ್ನು ೨೨ ರಿಂದ ೨೪ ಜೂನ್, ೨೧೧೨೩ ಎಂದು ೩ ದಿನಗಳ ಕಾಲ ಜಿಮಠ ಆವರಣದಲ್ಲಿ ಹಮ್ಮಿಕೊಳ್ಳುತ್ತಿದೆ,
ಕಾರ್ಯಗಾರಕ್ಕೆ ಸಂಬಂಧಿಸಿದ ಕೃಷಿಡಿಯನ್ನು ಕೃವಿವಿ ಕುಲಪತಿ ಡಾ.ಎಸ್.ವಿ.ಸುರೇಶ ಬಿಡುಗಡೆ ಮಾಡಿದರು.
ನಂತರ ಮಾತನಾಡಿ ಕೃಷಿಕರು ಬೆಳೆಗಳ ಉತ್ಪಾದನೆ, ಉತ್ಪಾದಕತೆ ಜೊತೆಗೆ ದ್ವಿತೀಯ ಕೃಷಿಯತ್ತ ಗಮನ ಹರಿಸುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯ ವಾಗಿದೆ. ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ ಆಕರ್ಷಿಣಿಯವಾಗಿ ತಾವೇ ಇತರ ರೈತರ ಜೊತೆಗೂಡಿ ಮಾರಾಟ ಮಾಡಿದರೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಹೆಚ್ಚಿನ ಲಾಭಗಳಿಸಬಹುದು,
ರೈತರು ಕೇವಲ ಉತ್ಪಾದಕರಾಗದೆ ಮಾರಾಟಗಾರರು ಸಹ ಆಗುವುದು ಅನಿವಾರ್ಯ, ಕೃಷಿ ಜೊತೆಗೆ ಹಣದ ಬೇಸಾಯ, ಜೇನುಸಾಕಣೆ, ಹೈನುಗಾರಿಕೆ, ಕುರಿ ಸಾಕಣೆ, ಮೀನು ಸಾಕಣೆ, ಕೋಳಿ ಸಾಕಣೆ, ಸಿರಿಧಾನ್ಯಗಳ ಮೌಲ್ಯವರ್ಧನೆ, ನರ್ಸರಿ, ಎರೆಗೊಬ್ಬರ, ಮಣ್ಣು ಮತ್ತು ನೀರಿನ ಪರೀಕ್ಷೆ ಕೇಂದ್ರ, ಪಶು ಆಹಾರ, ನೇರ, ಉಪ್ಪಿನಕಾಯಿ ಮಸಾಲೆ ಪುಡಿಗಳ ತಯಾರಿಕೆ, ಕೃಷಿ ಪ್ರವಾಸೋದ್ಯಮ ಮತ್ತು ಕೃಷಿ ಪರಿಕರಗಳ ಮಾರಾಟ ಕೇಂದ್ರ ಮುಂತಾದ ದ್ವಿತೀಯ ಕೃಷಿ ಕೈಗೊಳ್ಳಲು ಮುಂದಾಗಬೇಕು ಎಂದರು.
ಈ ನಿಟ್ಟನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಭಾರತೀಯ ವಿಸ್ತರಣಾ ಶಿಕ್ಷಣ ಸಂಘ, ನವದೆಹಲಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಮುಂತಾದ ಸಂಘ – ಸಂಸ್ಥೆಗಳೊಂದಿಗೆ ಇದೇ ಪ್ರಥಮ ಭಾರಿಗೆ ಕಾರ್ಯಗಾರ ಹಮ್ಮಿಕೊಳ್ಳುತ್ತಿರುವುದು ಸಂಪಸದ ವಿಷಯ, ಈ ಕಾರ್ಯಾಗಾರದಲ್ಲಿ, ಲಾಭದಾಯಕ ದ್ವಿತೀಯ ಕೃಷಿ ಘಟಕಗಳನ್ನು ಗುರುತಿಸಿ ಅವುಗಳನ್ನು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪಿಸಲು ಸೂಕ್ತವಾದ ಕೃಷಿ ವಿಸ್ತರಣಾ ತಂತ್ರಜ್ಞಾನಗಳ ಬಗ್ಗೆ ವಿವರವಾಗಿ ಚರ್ಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ನಿಯಮಗಳು ಹೊರಹೊಮ್ಮಿದರೆ ಕಾರ್ಯಗಾರ ಆಯೋಜಿಸುತ್ತಿರುವುದಕ್ಕೆ ಪ್ರತಿಫಲ ಸಿಗುವಂತಾಗುತ್ತದೆ ಎಂದು ತಿಳಿಸಿದರು.
ಕೃಷಿ ತಂತ್ರಜ್ಞಾನ ಅನುಸರಣೆ ಸಂಶೋಧನಾ ಸಂಸ್ಥೆ (ವಲಯ-೮)ರ ನಿರ್ದೇಶಕ ಡಾವಿ.ವೆಂಕಟ ಸುಬರುಣಿಯನ್, ಭಾರತೀಯ ವಿಸ್ತರಣಾ ಶಿಕ್ಷಣ ಸಂಘ, ನವದೆಹಲಿ (ಕರ್ನಾಟಕ ಘಟಕದ ಅಧ್ಯಕ್ಷರಾದ ಡ ಜಿ. ಈಶ್ವರಪ್ಪ, ಕಾರ್ಯದರ್ಶಿ ಡಾ.ವೈಎನ್, ಶಿದಲಿಂಗಯ್ಯ ಮುಂತಾದವರು ಇದ್ದರು.