ಕೃಷಿ ಮೇಳದಲ್ಲಿ ಮಾನಸಿಕ ಆರೋಗ್ಯ ಜಾಗೃತಿ

ಧಾರವಾಡ, ಸೆ.13: ಕೃಷಿ ಮೇಳದಲ್ಲಿ ಡಿಮ್ಹಾನ್ಸ್, ಟಿಲಿಮಾನಸ್ ಹಾಗೂ ಹಗಲು ಪಾಲನಾ ಕೇಂದ್ರದ ವತಿಯಿಂದ ಮಾನಸಿಕ ಆರೋಗ್ಯದ ಕುರಿತು ಪ್ರತಿದಿನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರಾಜ್ಯದ ಅತಿದೊಡ್ಡ ಕೃಷಿ ಮೇಳದ ಎರಡನೇ ದಿನದಂದು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಮಾಹಿತಿ ಅವಶ್ಯಕತೆ ಇರುವ ಜನರಿಗೆ, ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಜಾಗೃತಿಯನ್ನು ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯ ವಿವಿಧ ವಿಭಾಗದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ನೀಡಿದರು.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ಹಲವು ಜನರಿಗೆ ಈ ದಿನದ ಆಚರಣೆ ಮಹತ್ವವನ್ನು ತಿಳಿಸಿಕೊಡಲಾಯಿತು. ಟೆಲಿಮಾನಸ್ ತಂಡದ ಕೆಲವು ಸಿಬ್ಬಂದಿಗಳಿಂದ ಟೆಲಿಮಾನಸ್ ಸಹಾಯವಾಣಿ ನಂಬರ್‍ನ ಮಾಹಿತಿಯನ್ನು ಒದಗಿಸಲಾಯಿತು. ಕೃಷಿಮೇಳದಲ್ಲಿ ಆರೋಗ್ಯ ಕೇಂದ್ರದಲ್ಲಿ ಒಂದು ಸ್ಟಾಲ್ ಹಾಕಲಾಗಿದ್ದು, ಇಲ್ಲಿಯೂ ಸಹ ಮಾಹಿತಿಯನ್ನು ನೀಡಲಾಗುತ್ತಿದೆ.