ಕೃಷಿ ಮಾರು ಕಟ್ಟೆ ಶುಲ್ಕ ಕಡಿಮೆಗೆ ಪ್ರತಿಭಟನೆ


ಮಸ್ಕಿ,ಡಿ.೨೪- ಇಲ್ಲಿಯ ಕೃಷಿ ಉತ್ಪನ್ನ ಉಪ ಮಾರು ಕಟ್ಟೆಯಲ್ಲಿ ಪ್ರತಿ ಚೀಲಕ್ಕೆ ೩೫ ಪೈಸೆ ಮಾರು ಕಟ್ಟೆ ಶುಲ್ಕ ವಿಧಿಸಲಾಗುತ್ತಿತ್ತು ಕಳೆದ ಕೆಲ ದಿನಗಳಿಂದ ಮಾರು ಕಟ್ಟೆ ಶುಲ್ಕ ಒಂದು ರೂಪಾಯಿ ನಿಗದಿ ಮಾಡಿರುವ ಕಾರಣ ರೈತರು ಬೆಳೆದ ಬೆಳೆ ಮಾರಾಟ ಮಾಡಲು ತೊಂದರೆ ಯಾಗುತ್ತಿದೆ ಮಾರು ಕಟ್ಟೆ ಶುಲ್ಕ ಮೊದಲಿನಂತೆ ವಿಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ವರ್ತಕರು ಬಸವೇಶ್ವರ ವೃತ್ತ ಬಳಿ ಪ್ರತಿಭಟನೆ ನಡೆಸಿದರು. ಸರಕಾರ ವಿಧಿಸಿರುವ ಮಾರುಕಟ್ಟೆ ಶುಲ್ಕ ಅವೈಜ್ಷಾನಿಕ ವಾಗಿದೆ ಮಾರು ಕಟ್ಟೆ ಹೊರಗೆ ವಹಿವಾಟು ಮಾಡುವ ವರ್ತಕರಿಗೆ ಯಾವದೇ ರೀತಿಯ ಶುಲ್ಕ ವಿಧಿಸಿಲ್ಲ ಕೃಷಿ ಮಾರು ಕಟ್ಟೆಯಲ್ಲಿ ವಹಿವಾಟು ಮಾಡುವರಿಗೆ ಶುಲ್ಕ ವಿಧಿಸಿ ಸರಕಾರ ಅನ್ಯಾಯ ಮಾಡುತ್ತಿದೆ ಶುಲ್ಕ ಕಡಿಮೆ ಗೊಳಿಸ ಬೇಕು ಎಂದು ವರ್ತಕರು ಒತ್ತಾಯಿಸಿದರು ಸಿಎಂ. ಯಡಿಯೂರಪ್ಪ ಅವರಿಗೆ ಬರೆದ ನಾನಾ ಬೇಡಿಕೆಗಳ ಮನವಿ ಪತ್ರ ತಹಸೀಲ್ದಾರ್ ಬಲರಾಂ ಕಟ್ಟಿಮನಿ ಅವರಿಗೆ ಸಲ್ಲಿಸಿದರು. ವರ್ತಕರಾದ ಆದಯ್ಯ ಸ್ವಾಮಿ ಕ್ಯಾತ್ನಟ್ಟಿ, ಶಂಕ್ರಪ್ಪ ಹಳ್ಳಿ, ಚನ್ನಪ್ಪ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ಲಕ್ಷ್ಮೀ ನಾರಯಣ ಶೆಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ,ನಾಗರಾಜ ಯಂಬ್ಲದ, ಮಲ್ಲಿಕಾರ್ಜುನ, ಬಸವರಾಜ ಸೇರಿದಂತೆ ಇನ್ನಿತರ ವರ್ತಕರು ಇದ್ದರು.