ಕೃಷಿ ಪರಿಕಾರಗಳ‌ ಮಾರಾಟಗಾರರ ಮುಂಗಾರು ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.17: ಜಿಲ್ಲಾ ಪಂಚಾಯತ್ ಬಳ್ಳಾರಿ ಸಹಯೋಗದಲ್ಲಿ ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಕೃಷಿ ಪರಿಕರ (ರಸಗೊಬ್ಬರ, ಬೀಜ, ಕೀಟನಾಶಕ) ಮಾರಾಟಗಾರರ ಮುಂಗಾರು 2024-25ನೇ ಹಂಗಾಮು ಪೂರ್ವ ಸಭೆ ನಡೆಸಲಾಯಿತು.
ರೈತರಿಗೆ ಕಡ್ಡಾಯವಾಗಿ ಖರೀದಿಸಿದ ಕೃಷಿ ಸಾಮಗ್ರಿಗಳಿಗೆ ರಶೀದಿ ನೀಡಲು ಹಾಗೂ ರಸೀದಿಯ ಮೇಲೆ ಸಂಬಂಧಪಟ್ಟ ರೈತರ ಸಹಿ ಪಡೆಯಲು ಸೂಚಿಸಲಾಯಿತು, ಸರಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಲು ತಿಳಿಸಲಾಯಿತು.
ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡಬಾರದು ಹಾಗು ರಸಗೊಬ್ಬರ ಅಂಗಡಿಗಳಲ್ಲಿ ರಸಗೊಬ್ಬರ ಬಿಟ್ಟರೆ ಬೇರೆ ಯಾವುದೇ ಸಮಾಗ್ರಿಗಳನ್ನು ಮಾರಾಟಮಾಡಬಾರದು ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ, ರೈತರಿಗೆ ಬಿತ್ತನೆ ಬೀಜ ಹಾಗೂ ಕಳಫೆ ರಸಗೊಬ್ಬರಗಳನ್ನು ವಿತರಣೆ ಮಾಡಬಾರದು ಅಂತಹ ಮಾರಾಟಗಾರರು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು,
ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ, ತಾತ್ಕಾಲಿಕ ಅಭಾವ ಸಷ್ಟಿಸಿ ಹೆಚ್ಚಿನ ದರಗಳಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡದಿರಲು ಎಚ್ಚರಿಕೆ ನೀಡುತ್ತಾ ಬಿತ್ತನೆ ಬೀಜ ಮಾರಾಟಗಾರರಿಗೆ ಒತ್ತಾಯ ಪೂರ್ವಕವಾಗಿ ಒಂದೇ ಸಂಸ್ಧೆಯ ಬೀಜ ಮಾರಾಟ ಮಾಡದಿರಲು ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮಾರಾಟ ಮಾಡಲು ತಿಳಿಸಿ ಯಾವುದೇ ರೀತಿಯ ಬೀಜ ಅಭಾವ ಸೃಷ್ಟಿಸದಿರಲು ಹಾಗೂ ನಿಯಮಗಳನ್ನು ಅನುಸರಿಸದಿದ್ದಲ್ಲಿ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಭೆಯಲ್ಲಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ತಿರುಮಲೇಶ್ ತಿಳಿಸಿದರು.
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ ಪಟೇಲ್, ಕೃಷಿ ಅಧಿಕಾರಿಗಳಾದ ನಿಸಾರ್, ಗರ್ಜಪ್ಫ ಹಾಗೂ ಕೃಷಿ ಮಾರಾಟಗಾರರ ಸಂಘದ ಅಧ್ಯಕ್ಷ ಮಾಧವಯ್ಯ ಹಾಗೂ  ಕೃಷಿ ಪರಿಕಾರಗಳ ಮಾರಾಟಗಾರರು ಇದ್ದರು.