ಕೃಷಿ ಪರಿಕರ ಮಾರಾಟಗಾರರ ಸಭೆ

ಕೊಟ್ಟೂರು, ಏ.27: ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ತಾಲೂಕಿನ ವ್ಯಾಪ್ತಿಯ ಕೃಷಿ ಪರಿಕರ ಮಾರಾಟಗಾರರ ಸಭೆ ಸೋಮವಾರ ನಡೆಯಿತು.
ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ ಮಾತನಾಡಿ, ಬೀಜ, ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳ ಗುಣಮಟ್ಟ ಕಾಪಾಡಿ ರೈತರಿಗೆ ಅನ್ಯಾಯವಾಗದಂತೆ ಪ್ರತಿಯೊಬ್ಬ ಮಾರಾಟಗಾರರು ರೈತರಿಗೆ ಕಡ್ಡಾಯವಾಗಿ ಖರೀದಿಸಿದ ಕೃಷಿ ಸಾಮಾಗ್ರಿಗಳಿಗೆ ರಸೀದಿ ನೀಡಬೇಕು ಮತ್ತು ಸರ್ಕಾರ ನಿಗದಿಪಡಿಸಿದ ಧರದಲ್ಲೇ ಮಾರಾಟ ಮಾಡಬೇಕು. ಕಳೆಪೆ ಹಾಗೂ ಗೊಬ್ಬರದ ಅಭಾವ ಸೃಷ್ಠಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಮಾರಾಟಗಾರರ ಸುಳಿವು ದೊರಕಿದಲ್ಲಿ ಅಂತಹ ಮಾರಾಟಗಾರರ ಲೈಸೇನ್ಸ್ ರದ್ದುಮಾಡಲಾಗುತ್ತದೆ ಜೊತಗೆ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತೇವೆ ಎಂಬ ಎಚ್ಚರಿಕೆ ನೀಡಿದರು.ರೈತಸಂಪರ್ಕಕೇಂದ್ರದ ಅಧಿಕಾರಿ ಶ್ಯಾಮಸುಂದರ್, ತಿಮ್ಮಣ್ಣ ಇದ್ದರು.