ಕೃಷಿ ಪರಿಕರ ಮಾರಾಟಗಾರರ ನೆರವಿಗಾಗಿ ಸಿಎಂ ಕೃಷಿ ಸಚಿವರಿಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.02:  ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಕೃಷಿ ಪರಿಕರ ಮಾರಾಟಗಾರರ ಸಂಘದ ಪದಾಧಿಕಾರಿಗಳು  ಇಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮೊಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕೃಷಿ ಪರಿಕರ ಮಾರಾಟಗಾರರು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿಚಾರಣೆಗೆ ಸರ್ಕಾರ ನೆರವಿಗೆ ಬರಬೇಕೆಂದು ಮನವಿ ಮಾಡಿರುವುದಾಗಿ ಸಂಘದ ಸಂಘಟನಾ ಕಾರ್ಯದರ್ಶಿ ನಗರದ  ಹೆಚ್.ತಿಮ್ಮನಗೌಡ ತಿಳಿಸಿದ್ದಾರೆ. 
ರಾಜ್ಯ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ಲೋಕಿಕೆರೆ. ಸಂಘಟನಾ ಕಾರ್ಯಧರ್ಶಿಗಳಾದ ತಾವು  ಕಾರ್ಯದರ್ಶಿ  ಉಮಾಪತಿ. ಜಂಟಿ ಕಾರ್ಯದರ್ಶಿ ಸೋಮಶೇಖರ್ ಅವರೆಲ್ಲ ಸೇರಿ ಮನವಿ ಮಾಡಿದೆ. ನಮ್ಮ ಮನವಿಗೆ ಮುಖ್ಯ ಮಂತ್ರಿಗಳು ಮತ್ತು ಕೃಷಿ ಸಚಿವರು ಉತ್ತಮ ಸ್ಪಂದನೆ ನೀಡಿದ್ದಾರೆ. ಬರುವ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು. ನಿಮ್ಮ‌ಬೇಡಿಕೆಗಳನ್ನು ಅಲ್ಲಿ ಪರಿಗಣಿಸಲಿದೆಂದು ಭರವಸೆ ನೀಡಿದ್ದಾರೆಂದು ತಿಮ್ಮನಗೌಡ ತಿಳಿಸಿದ್ದಾರೆ.