ಕಲಬುರಗಿ:ಜು.24:ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ವ್ಯಕ್ತಿತ್ವ ವಿಕಸÀನ ತರಬೇತಿಯನ್ನು ಡಾ. ಎಸ್.ಬಿ. ಗೌಡಪ್ಪ ವಿಸ್ತರಣ ನಿರ್ದೇಶಕರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ರವರು ಮಾತನಾಡಿ ಮನುಷ್ಯನಲ್ಲಿ ವಿಶ್ವಾಸ, ಜ್ಞಾನ, ಅರಿವು, ಸಮಯ ಪಾಲನೆ, ತಿಳುವಳಿಕೆ, ಪರಿಶ್ರಮ ಇವುಗಳನ್ನು ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡಲ್ಲಿ ಯಶಸ್ವಿನ ಹಾದಿಗಳು ಸುಗಮವಾಗಿ ನಡೆಯುತ್ತದೆ ಎಂದರು. ಮನಸ್ಸಿನ ಏಕಾಗ್ರತೆ, ಸಮಸ್ಯ ಪರಿಹರಿಸುವ ಮಾಗೋಪಾಯಗಳನ್ನು ದೈನಂದಿನ ಜೀವನದಲ್ಲಿ ನಾವುಗಳು ಹುಡುಕುವ ಸ್ಥಿತಿ ಎದುರಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಪ್ರಸ್ತುತ ಒತ್ತಡದ ಸನ್ನಿವೇಶಗಳನ್ನು ಗುರುಹಿರಿಯರ, ಮಾರ್ಗದರ್ಶಕರ ಸಹಕಾರ ಸಲಹೆ ಅತ್ಯಗತ್ಯ ಎಂದರು. ನಂತರ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ತಾಕುಗಳಿಗೆ ಭೇಟಿ ನೀಡಿ ಕೆವಿಕೆ ವಿಜ್ಞಾನಿಗಳು ಜಿಲ್ಲೆಯಲ್ಲಿ ಬಿತ್ತನೆ ತಡವಾಗಿದ್ದರೂ ವಿಪರೀತ ಮಳೆಯಿಂದಾಗಿ ಆಗುವ ಕೃಷಿ ಸಮಸ್ಯಗಳಿಗೆ ರೈತರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು ಹಾಗೂ ಪರ್ಯಾಯ ಬೆಳೆ, ತೊಗರಿ ಆಧಾರಿತ ಕೃಷಿ ಚಟುವಟಿಕೆಗೆ ತಾಂತ್ರಿಕತೆಗಳನ್ನು ರೈತರಿಗೆ ನೀಡಲು ಸಲಹೆ ನೀಡಿದರು. ಕೆವಿಕೆ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ, ಡಾ. ವಾಸುದೇವ ನಾಯ್ಕ್, ಡಾ. ಜಹೀರ್ ಅಹೆಮದ್ ಮತ್ತು ದೇಶಿ ಕಾರ್ಯಕ್ರಮದ ಸಂಚಾಲಕಾರದ ಡಾ. ಪಾಂಡುರಂಗರಾವ ರವರು ಉಪಸ್ಥಿತರಿದ್ದರು.