ಕೃಷಿ ಪರಿಕರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕೃಷಿ ಅಧಿಕಾರಿ ರಾಠೋಡ

ಚಿಂಚೋಳಿ,ಜೂ.8- ಇಲ್ಲಿನ ಕೃಷಿ ಪರಿಕರ ಬೀಜ, ಕೀಟನಾಶಕ (ಪಟ್ಲೆಜರ್) ಮಾರಾಟ ಮಾಡುವ ಮಳಿಗೆಗಳಿಗೆ ತಾಲೂಕ ಕೃಷಿ ಇಲಾಖೆಯ ಅಧಿಕಾರಿ ಡಾ. ಅನೀಲಕುಮಾರ ರಾಠೋಡ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ರೈತರಿಗೆ ಮಾರಾಟ ಮಾಡಲಾಗುತ್ತಿರುವ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ದುಪ್ಪಟ್ಟು ಬೆಲೆಗಳಲ್ಲಿ ಹಾಗೂ ನಕಲಿ ಬೀಜ, ಕೀಟನಾಶಕ ಕೃಷಿ ಪರಿಕರ ಮಾರಾಟಕ್ಕೆ ಕಡಿವಾಣ ಹಾಲಕು ವಿವಿಧ ಮಳಿಗೆಗಳಿಗೆ ದಿಢೀರನೆ ಭೇಟಿ ನೀಡಿ ಅಲ್ಲಿನ ದಾಸ್ತಾನುಗಳನ್ನು ಪರಿಶೀಲಿಸಿದರು.
ಮಾಧ್ಯಮರು ಜೊತೆಗೆ ಮಾತನಾಡಿದ ಅವರು, ತಾಲೂಕಿನ ರೈತರಿಗೆ ಮುಂಗಾರು ಬಿತ್ತನೆ ಬೀಜ ಮತ್ತು ಡಿಎಪಿ ಕೀಟನಾಶಕ ಔಷಧಿಗಳನ್ನು ಬೆಲೆಗಳನ್ನು ಸರ್ಕಾರ ನಿಗದಿ ಮಾಡಿರುವ ದರದಂತೆ ಎಲ್ಲ ಕೃಷಿ ಮಳಿಗೆಗಳು ಮಾರಾಟ ಮಾಡಬೇಕು ಒಂದು ವೇಳೆ ಹೆಚ್ಚಿನ ಬೆಲೆ ಪಡೆದರೆ ತಮ್ಮ ಗಮನಕ್ಕೆ ತಂದಲ್ಲಿ ಅಂತವರ ಫರ್ಟಿಲೈಜರ್ ಮಳಿಗೆಯ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂದರು,
ಚಿಂಚೋಳಿ ತಾಲೂಕಿನಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಸೋಯಾ ಬೀಜವು ಈಗಾಗಲೇ 1000 ಮುನ್ನೂರ ಕುಂಟಾಲ್ ರೈತರಿಗೆ ನೀಡಲಾಗಿದ್ದುಆದರೂ ಕೂಡ ಸೋಯಾ ಬೀಜ ಇನ್ನ ಚಿಂಚೋಳಿ ತಾಲೂಕಿನಲ್ಲಿ ರೈತರಿಗೆ ಕಡಿಮೆಯಾಗಿದ್ದು, ಅದರಿಂದ ಚಿಂಚೋಳಿಯ ಶಾಸಕರಾದ ಡಾ. ಅವಿನಾಶ ಜಾಧವ ಅವರು ಕಲಬುರ್ಗಿ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಜೊತೆಗೆ ಮಾತನಾಡಿ ಚಿಂಚೋಳಿಗೆ 1600 ಕುಂಟಲ್ ಸೋಯಾ ಬೀಜ ನೀಡಬೇಕೆಂದು ಕೃಷಿ ಜಂಟಿ ನಿರ್ದೇಶಕರಿಗೆ ಮಾತನಾಡಿದ್ದಾರೆ ತಾಲ್ಲೂಕಿನ ರೈತರು ಎರಡು ದಿನಗಳ ಒಳಗಾಗಿ ಸೋಯಾ ಬೀಜವ ಚಿಂಚೋಳಿಗೆ ಬರಲಿದ್ದು ಬಂದ ನಂತರ ಎಲ್ಲ ರೈತರಿಗೆ ವಿತರಣೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಚಿಂಚೋಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಅಭಿಲಾಶ. ಕೃಷಿ ಸಾಯಕ ಅಧಿಕಾರಿಗಳಾದ ಡಾ. ರಘುವೀರ. ಕೃಷಿ ಇಲಾಖೆ ಸಿಬ್ಬಂದಿಗಳಾದ ರೆಡ್ಡಿ ಮತ್ತು ರಮೇಶ ದೇಗಲಮಡಿ. ಇದ್ದರು.