ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿಃ ಡಾ.ಎಂ. ಗೋಪಾಲ

ವಿಜಯಪುರ, ಮಾ.25-ದೇಶದಲ್ಲಿ ಶೇ. 49 ರಷ್ಟು ರೈತರು ಕೃಷಿ ಪರಿಕರ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದು, ಅಪಾರವಾದ ನಂಬಿಕೆಯನ್ನು ಇಟ್ಟಿರುವರು. ಆದ್ದರಿಂದ ತಾವುಗಳು ರೈತರಿಗೆ ಸೂಕ್ತವಾದ ತಂತ್ರಜ್ಞಾನಗಳನ್ನು ಒದಗಿಸಿ ಅವರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಬೇಕು ಮತ್ತು ನಿಸ್ವಾರ್ಥ ಸೇವೆ ಹಾಗೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ, ದೇಸಿ ರಾಜ್ಯ ನೋಡಲ್ ಅಧಿಕಾರಿ, ಡಾ. ಎಂ. ಗೋಪಾಲ ಹೇಳಿದರು.
ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ(ದೇಸಿ) ಕೋರ್ಸಗಳ ಉದ್ಘಾಟಣಾ ಸಮಾರಂಭವು ಕೃಷಿ ತಂತ್ರಜ್ಞರ ಸಂಸ್ಥೆ, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ದೇಸಿ ಕೋರ್ಸ ಮುಗಿದ ನಂತರ ತಮ್ಮ ಮಾರಾಟ ಮಾಡುವ ಕೇಂದ್ರಗಳಲ್ಲಿ ದೇಸಿ ಕಾರ್ನರ್ ಸ್ಥಾಪಿಸಿ ರೈತರಿಗೆ ಉಪಯೋಗವಾಗುವ ತಾಂತ್ರಿಕ ಹಸ್ತ ಪತ್ರಿಕೆಗಳನ್ನು ಇಡುವದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವದು. ಕೃಷಿ ಪರಿಕರ ಮಾರಾಟಗಾರರು ವಿಸ್ತರಣಾ ಕಾರ್ಯಕರ್ತರಾಗಿ ರೈತರ ಏಳಿಗೆಗಾಗಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ, ಕೃಷಿ ಮಹಾವಿದ್ಯಾಲಯ, ವಿದ್ಯಾಧಿಕಾರಿ, ಡಾ. ಎಸ್. ಬಿ. ಕಲಘಟಗಿ, ಇವರು ಮುಂದಿನ ದಿನಗಳಲ್ಲಿ ತಮಗೆ ವಿವಿಧ ವಿಷಯಗಳಲ್ಲಿ ಪರಿಣಿತ ಹೊಂದಿದ ವಿಜ್ಞಾನಿಗಳಿಂದ ಪಾಠಗಳನ್ನು ಮಾಡುವಾಗ ಆಸಕ್ತಿಯಿಂದ ಕೇಳಿ ಪ್ರಮುಖ ಅಂಶಗಳನ್ನು ಟಿಪ್ಪಣಿಗಳನ್ನು ಮಾಡಿ ಹೆಚ್ಚಿನ ಜ್ಞಾನವನ್ನು ಪಡೆÀಯಬಹುದೆಂದರು.ತಮ್ಮ ಕ್ಷೇತ್ರದಲ್ಲಿಯ ರೈತರಿಗೆ ತಾವು ಪಡೆದ ತಾಂತ್ರಿಕ ಮಾಹಿತಿಯನ್ನು ಒದಗಿಸಿ ರೈತರ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಸೂಚಿಸಿದರು.
ಸಹ ಸಂಶೋಧನಾ ನಿರ್ದೇಶಕ, ಡಾ. ಅಶೋಕ ಎಸ್. ಸಜ್ಜನ ಮಾತನಾಡುತ್ತಾ ಈ ದೇಸಿ ಕೋರ್ಸಿನಲ್ಲಿ ತಾವುಗಳು ವಿದ್ಯಾರ್ಥಿಗಳಂತೆ ವಿವಿಧ ಕೃಷಿ ವಿಜ್ಞಾನಿಗಳಿಂದ ತಂತ್ರಜ್ಞಾನಗಳನ್ನು ಪಡೆದು ರೈತರ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು. ಸರಕಾರವು ನೀಷೇದ ಮಾಡಿದ ಕೀಟನಾಶಕಗಳನ್ನು ಮಾರಾಟ ಮಾಡದೇ ಅನ್ನದಾತರಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಪೂರೈಸಿ ದೇಶದ ಆಹಾರ ಉತ್ಪಾದನೆ ಹೆಚ್ಚಿಸಲು ತಮ್ಮ ಕೊಡುಗೆ ಅಪಾರವಾದುದೆಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಲಿಂಗಪೂರ ರೋಹಿಣಿ ಸಮೂಹ ಸಂಸ್ಥೆಯ ಸಂಸ್ಥಾಪಕ, ಎಂ, ವೈ, ಕಟ್ಟಿ, ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಬದ್ದತೆಯಿಂದ ಯಶಸ್ಸು ಪಡೆದುಕೊಳ್ಳಿ ಆದರೆ ರೈತರಿಗೆ ಮೋಸ ಮಾಡಿ ಲಾಭಗಳಿಸಬೇಡಿ ಎಂದು ತಿಳಿಸಿದರು. ಕರ್ತವ್ಯ ಪ್ರಜ್ಞೆಯಿಂದ ಕೆಲಸಮಾಡಿ ವಿಜ್ಞಾನಿಗಳಿಂದ ಹೊಸ ಹೊಸ ತಂತ್ರಜ್ಞಾನಗಳನ್ನು ಪಡೆದುಕೊಂಡು ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು. ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಬೆಳೆಗಳಿಗೆ ಅವಶ್ಯವಿರುವ ಪೋಶಕಾಂಶಗಳನ್ನು ಪೂರೈಸಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು ಹಾಗೂ ಕೊನೆಯದಾಗಿ ರೈತರಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವಿಜಯಪುರ ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕ, ಡಾ. ರಾಜಶೇಖರ ವಿಲಿಯಮ್ಸ್ ರವರು ವಿಜಯಪುರÀ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಕೃಷಿ ಪರಿಕರ ಮಾರಾಟಗಾರರಿಗೆ ತಮ್ಮ ಕ್ಷೇತ್ರದ ಹೆಚ್ಚಿನ ರೈತರು ತಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಮೋಸ ಮಾಡದೇ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕೆಂದು ಸೂಚಿಸಿದರು. ತಾವುಗಳು ಮಾನವಿಯತೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ನಿಯತ್ತಿನಿಂದ ವ್ಯಾಪಾರ ಮಾಡಿ ಆದರೆ ಯಾವುದೇ ಕಾರಣಕ್ಕೂ ಅನ್ನ ಕೊಡುವ ರೈತರಿಗೆ ಮೋಸ ಮಾಡಬೇಡಿ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ವಿಜಿಲನ್ಸ್ ಟೀಮ್‍ಗಳನ್ನು ಮಾಡಿ ಕಳಪೆ ಪರಿಕರ ಮಾರಾಟಗಾರರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲಾಗುವದೆಂದು ತಿಳಿಸಿದರು.
ಕಾರ್ಯಕ್ರಮವನ್ನು ಸಹ ವಿಸ್ತರಣಾ ನಿರ್ದೇಶಕ ಹಾಗೂ ದೇಸಿ ಸಂಯೋಜಕ ಡಾ. ಆರ್. ಬಿ. ಬೆಳ್ಳಿ ನಿರೂಪಿಸಿದರು ಹಾಗೂ ಬಿ. ಬಿ ಬಿರಾದಾರ ಇವರ ವಂಧನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಎಮ್. ಎಸ್. ಧನೆಲಪ್ಪಗೋಳ, ನಾಗಪ್ಪ. ಚಿಂಚೋಳಿ, ಜಿ. ಆರ್. ದೊಡ್ಡಿಹಾಳಿ ಹಾಗೂ ಬಿ. ಟಿ. ಈಶ್ವರಗೊಂಡ ಇವರುಗಳು ಉಪಸ್ಥಿತರಿದ್ದರು.