ಕೃಷಿ ಪದ್ಧತಿಯನ್ನು ರೈತಾಪಿ ವರ್ಗಕ್ಕೆ ಪರಿಚಯಿಸಿದವರು ಬಾಬು ಜಗಜೀವನರಾಮ್-ನಾಗನಾಳ ಮುನಿಯಪ್ಪ

ಕೋಲಾರ,ಏ.೭- ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕೋಲಾರ ಜಿಲ್ಲಾ ಶಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ೧೧೬ ನೇ ಜಯಂತಿ ಅಂಗವಾಗಿ ಕೋಲಾರ ನಗರದ ಗಂಗಮ್ಮನಪಾಳ್ಯ(ಶ್ರೀನಿವಾಸಪುರ ಟೋಲ್ ಗೇಟ್) ಬಳಿ ಇರುವ ನಾಮಫಲಕದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ಸಮದರ್ಭದಲ್ಲಿ ಮಾತನಾಡಿದ ನಾಗನಾಳ ಮುನಿಯಪ್ಪ, ಭಾರತ ಆಹಾರ ಉತ್ಪಾದನೆಯಲ್ಲಿ ಹಾಹಾಕಾರ ಪಡುವಾಗ ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತದ ಕೃಷಿ ಪದ್ಧತಿಯನ್ನು ದೇಶದ ರೈತಾಪಿ ಜನರಿಗೆ ಪರಿಚಯ ಮಾಡಿಕೊಟ್ಟು ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಪಡೆಯುವಲ್ಲಿ ಬಹು ಪ್ರಮುಖ ಪಾತ್ರ ವಹಿಸಿದವರು ಎಂದು ಬಣ್ಣಿಸಿದರು.
ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶ ಸ್ವತಂತ್ರಗೊಳಿಸುವಲ್ಲಿ ರಕ್ಷಣಾ ಸಚಿವರಾಗಿ ಬೇರೆ ದೇಶಗಳು ನಮ್ಮತ್ತ ತಿರಿಗಿ ನೋಡುವಂತೆ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ತಂದವರು ಪ್ರಧಾನಿಯಾಗುವ ಎಲ್ಲಾ ಅವಕಾಶಗಳಿದ್ದರೂ ಕಡಿಮೆ ಬಹುಮತದ ವ್ಯಕ್ತಿಗೆ ಪ್ರಧಾನಿ ಪಟ್ಟ ಕೊಟ್ಟು ಜಾತಿಯ ಕಾರಣಕ್ಕೆ ಪ್ರಧಾನಿ ಹುದ್ದೆಯಿಂದ ವಂಚಿತಾರಾದವರು, ಸುಮಾರು ೫೦ ವರ್ಷಗಳ ರಾಜಕೀಯ ಜೀವನವನ್ನು ನಡೆಸಿದ ಬೇರೆ ಬೇರೆ ಹುದ್ದೆಗಳಲ್ಲಿ ಸಮರ್ಥವಾಗಿ ಆಡಳಿತ ಚುಕ್ಕಾಣಿ ಹಿಡಿದ ವ್ಯಕ್ತಿ ಜಗಜೀವನ್ ರಾಂ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗಂಗಮ್ಮನಪಾಳ್ಯದ ರಾಮಯ್ಯ, ಶ್ರೀನಿವಾಸ್, ಶೇಕರ್, ಶಾಸ್ತ್ರಿ, ಗೋವಿಂದರಾಜು, ಆಂಜಿನಪ್ಪ, ರಾಜೇಶ್, ರಮೇಶ್, ಮದನಹಳ್ಳಿ ವೆಂಕಟೇಶ, ಕೋಡಿರಾಮಸಂದ್ರ ಯಲ್ಲಪ್ಪ, ಮಧು, ಮನೋಜ್, ಗಾಂಧಿ ಮುಂತಾದವರು ಹಾಜರಿದ್ದರು.