ಕೃಷಿ ಪತ್ತಿನ 108ನೇ ವಾರ್ಷಿಕ ಮಹಾಸಭೆ

ಮುನವಳ್ಳಿ,ಸೆ.26: ಪಟ್ಟಣದ ಮುನವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 108 ನೇ ವಾರ್ಷಿಕ ಮಹಾಸಭೆ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಜರುಗಿತು.
ಸಂಸ್ಥೆಯ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ ಸಹಕಾರಿ ಸಂಘಗಳು ರೈತರಿಗೆ ವರದಾನವಾಗಿದ್ದು ಕೃಷಿ ಅಭಿವೃದ್ದಿಗೆ ಪೂರಕವಾಗಿದೆ ಆದ್ದರಿಂದ ರೈತರು ಸಂಘದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಬೇಕು ಜೊತೆಗೆ ಪಡೆದಂಥ ಸಾಲವನ್ನು ಸಕಾಲಕ್ಕೆ ತುಂಬಿ ಪರಸ್ಪರ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
ಈ ಸಾಳಿನಲ್ಲಿ ಸಂಘವು 16.07.509 ರೂ ಗಳ ನಿವ್ವಳ ಲಾಭ ಗಳಿಸಿದೆ ಶೇರು ಸದಸ್ಯರಿಗೆ 5% ಲಾಭಾಂಶ ನೀಡಲಾಗುವುದು ಮುಂಬರುವ ದಿನಗಳಲ್ಲಿ ಸಂಘದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನಂತರ ಮಾತನಾಡಿದ ನ್ಯಾಯವಾದಿ ವ್ಹಿ.ಎಸ್.ಯಕ್ಕುಂಡಿ ಸಂಘದ 108 ವರ್ಷವನ್ನು ಮೆಲಕು ಹಾಕಿ ಸಂಘದ ಬೆಳವನಿಗೆ ಬಗ್ಗೆ ಎಲ್ಲರಿಗು ತಿಳಿಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಶೋಕ ಪಟ್ಟಣಶೆಟ್ಟಿ ಸಂಘದ ವಾರ್ಷಿಕ ವರದಿ ಮಂಡಿಸಿ ಸಂಘದಿಂದ ಸಿಗುವ ಅನೇಕ ಸೌಲಭ್ಯಗಳ ಕುರಿತು ವಿವರಿಸಿದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಲ್ಲಪ್ಪ ಕಿತ್ತೂರ ನಿರ್ದೇಶಕರಾದ ಅರುಣಗೌಡ ಪಾಟೀಲ, ಅಂದಾನೆಪ್ಪ ಗೋಮಾಡಿ, ಶಿವಲಿಂಗಯ್ಯ ಹಿರೇಮಠ ಪ್ರಕಾಶ ಕಾಮಣ್ಣವರ, ಮೌಲಾಸಾಬ ಬಂಸ್ರೋಳ್ಳಿ ಎಂ.ಬಿ.ಬಾಳಿ ಗಂಗಪ್ಪ ನಲವಡೆ, ಯಲ್ಲಪ್ಪ ಬೆರಗುಡ್ಡ, ಎಂ.ಆರ್. ಗೋಪಶೆಟ್ಟಿ, ರಾಜಶೇಖರ ಬಾಳಿ, ಈರಣ್ಣ ಕಮ್ಮಾರ, ಅರುಣ ಬಾಳಿ, ಸೋಮಶೇಖರ ಯಲಿಗಾರ, ಪಂಚಪ್ಪ ಗುಂಡ್ಲೂರ, ಮಹಾಂತೇಶ ಕಮತಗಿ, ಉದಯ ರಾವೂಳ, ಮಹಾಂತೇಶ ಮಗೆಪ್ಪಗೋಳ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಾ. ವೀರೆಂದ್ರ ಬಾಳಿ, ಮಲ್ಲೇಶಪ್ಪ ಭಾಜಪ್ಪಗೋಳ, ಯಶವಂತ ಯಲಿಗಾರ, ಎಸ್.ಬಿ.ಹಿರಿಲಿಂಗನ್ನವರ, ಜೋತಿ ಯಲಬುರ್ಗಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಎಂ.ಎ.ಕಮತಗಿ ನಿರೂಪಣೆಯನ್ನು ಬಿ.ಬಿ.ಹೂಲಿಗೊಪ್ಪ, ವಂದನಾರ್ಪಣೆಯನ್ನು ಬಾಳು ಹೊಸಮನಿ ಮಾಡಿದರು.