ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ನ್ಯಾಮತಿ.ಜ.೧೨; ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ  ನಡೆಯಿತು.ಕಳೆದ ಡಿಸೆಂಬರ್ ತಿಂಗಳನಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಅಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ  ಎ.ಸಿದ್ದವೀರಪ್ಪ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ  ಪಾಲಾಕ್ಷಮ್ಮ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದರು ಇವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದಕಾರಣ ಇವರ ಅಯ್ಕೆಯನ್ನು ಅವಿರೋಧವಾಗಿ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿಯಾಗಿದ್ದ ಹೊನ್ನಾಳಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಸತೀಶ್‌ಕುಮಾರ್ ಘೋಷಣೆ ಮಾಡಿದರು.ಚುನಾವಣೆಯಲ್ಲಿ  ನೂತನ ನಿರ್ದೇಶಕರಾದ ವೀರೇಶ್‌ಪ್ಪ  ಎ.ಜಿ.ಬಸವನಗೌಡ , ದನಂಜಯ , ಎಸ್.ಎಂ.ಚಂದ್ರಶೇಖರ್‌ಯ್ಯ , ಸುಧಾ , ಎಸ್.ಸಿದ್ದಪ್ಪ , ಎಂ.ಸಿ.ಸಣ್ಣ ಚಿಕ್ಕಪ್ಪ , ಮಂಜುನಾಥ್ , ಎಸ್.ನಾಗರಾಜಪ್ಪ ಇದ್ದರು.ನ್ಯಾಮತಿ ಡಿಸಿಸಿಬ್ಯಾಂಕ್‌ನ ಕ್ಷೇತ್ರಾಧಿಕಾರಿ ಎ.ಲೋಕೇಶ್ , ಗೋವಿನಕೋವಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಎಂ.ಜಗದೀಶ್ ಮುಖಂಡರಾದ ರುದ್ರೇಶಪ್ಪ ಸೇರಿದಂತೆ ಇತರರು ಇದ್ದರು.