ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಸೌಲಭ್ಯಗಳು


ಸಂಜೆವಾಣಿ ವಾರ್ತೆ
ಸಂಡೂರು:ಮಾ: 28: ತಾಲೂಕಿನಾದ್ಯಂತ ಎಲ್ಲಾ ರೈತರಿಗೆ ಬಹು ವಿಶೇಷವಾಗಿ ಸಂಘದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮಹತ್ತರ ಗುರಿಯನ್ನು ಹೊಂದಿದ್ದು ರೈತರು ಅದರ ಪೂರ್ಣ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಪ್ರಗತಿಯನ್ನು ಸಾಧಿಸಬೇಕು ಎಂದು ಅಧ್ಯಕ್ಷ ಜೆ.ಎಂ. ಶಿವಪ್ರಸಾದ ತಿಳಿಸಿದರು.
ಅವರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2022-23ನೇ ಸಾಲಿನಲ್ಲಿ ನೂತನವಾಗಿ  4 ಟ್ಯಾಕ್ಟರ್‍ಗಳನ್ನು ರೈತರಿಗೆ ಮಂಜೂರು ಮಾಡಿದ್ದು ಅವರಿಗೆ ವಿತರಿಸುವ ಮೂಲಕ ಸಂಘದ ಪ್ರಗತಿ, ರೈತರ ಪ್ರಗತಿಯನ್ನು ಸಾಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಲಿಂಗಪ್ಪ ಮಾಹಿತಿ ನೀಡಿ ಒಟ್ಟು 4 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು 3 ಸ್ವರಾಜ್ಯ ಕಂಪನಿಯ, 1 ಕುಬೋಟೋ ಕಂಪನಿಯ ಟ್ಯಾಕ್ಟರ್ ಅಗಿದ್ದು ಒಟ್ಟು ಮೊತ್ತ 2051000-00 ಅಗಿದ್ದು 10 ಸಮಕಂತುಗಳಲ್ಲಿ ಕಟ್ಟಬೇಕು, ಕೇವಲ 3% ಬಡ್ಡಿಧರದಲ್ಲಿ, 6 ತಿಂಗಳಿಗೆ 1 ಕಂತು, ಅದನ್ನು ಮೀರಿದರೆ ಬಡ್ಡಿಧರ 10% ಏರುತ್ತದೆ. ಅದರೆ ರೈತರು ನಿಗದಿತ ಸಮಯದಲ್ಲಿ ಕಟ್ಟುವ ಮೂಲಕ ಲಾಭ ಪಡೆದುಕೊಳ್ಳಬೇಕು, ಟ್ಯಾಕ್ಟರ್ ಫಲಾನುಭವಿಗಳ ಆಯ್ಕೆಯ ಮಾನದಂಡಗಳಾಗಿ 6 ಎಕರೆ ನೀರಾವರಿ, ಇಲ್ಲವೇ 8 ಎಕರೆ ಒಣಭೂಮಿ ಇದ್ದರೆ ದೊಡ್ಡ ಟ್ಯಾಕ್ಟರ್, 4 ಎಕರೆ ನೀರಾರವರಿ, 6 ಎಕರೆ ಒಣ ಭೂಮಿ ಇದ್ದರೆ ಸಣ್ಣ ಟ್ಯಾಕ್ಟರ್ ನೀಡಲಾಗುವುದು, ಅದೇ ರೀತಿ ವಿಶೇಷವಾಗಿ ಇಲ್ಲಿಯವರೆಗೆ ನೀಡದ ಸಾಲವನ್ನು ಈ ಬಾರಿ ರೈತರಿಗೆ ಸಣ್ಣ, ಮಧ್ಯಮಾವಧಿ ಸಾಲಗಳನ್ನು ನೀಡಲಾಗುತ್ತಿದೆ, 10 ಲಕ್ಷ ರೂಪಾಯಿ ವರೆಗೆ ಸಾಲ ನೀಡಲಾಗುವುದು ಅಲ್ಲದೆ ಅವರ ಭೂಮಿಗೆ ಅನುಗುಣವಾಗಿ ಸಾಲದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. 3% ಬಡ್ಡಿಯ ಧರದಲ್ಲಿ, ಸಾಲ ಮರುಪಾವತಿ ಮಾಡದೇ ಇದ್ದಲ್ಲಿ ಬಡ್ಡಿಯ ಧರ ಏರುತ್ತಾ ಹೋಗುತ್ತದೆ 10% ವರೆಗೆ,
ನಮ್ಮ ಸಂಘದಿಂದ ಒಟ್ಟು 1000 ರೈತರಿಗೆ ಬೆಳೆ ಸಾಲವನ್ನು ಬಡ್ಡಿ ರೈತವಾಗಿ ನೀಡಲಾಗಿದೆ, 3 ಲಕ್ಷದ ವರೆಗೆ 0% ಬಡ್ಡಿ ಧರ ಒಟ್ಟು 7 ಕೋಟಿ ಸಾಲವನ್ನು ನೀಡಲಾಗಿದೆ. ಸ್ವ ಸಹಾಯ ಸಂಘಕ್ಕೆ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ 3 ಸಂಘಗಳು ಸಲ್ಲಿಸಿವೆ, ಅಲ್ಲದೆ ಹೈನುಗಾರಿಕೆಗೆ ಸಹ ಸಾಲ ಪಡೆಯಲು 2 ಅರ್ಜಿಗಲು ಸಲ್ಲಿಕೆಯಾಗಿವೆ , ಕೊಟೇಷನ್ ಮೊತ್ತಕ್ಕೆ ಶೇ: 80% ರಷ್ಟು ಸಾಲ, ಶೇ 3% ಬಡ್ಡಿ, ಈ ಬಾರಿ ರೈತರಿಗೆ ಬರೀ ಗೊಬ್ಬರ ಕೊಡುತ್ತಿದ್ದೇವು, ಈ ಬಾರಿ ಗೊಬ್ಬರದ ಜೊತೆಗೆ ಬೀಜ, ಔಷಧಿಗಳನ್ನು ಸಹ ವಿತರಿಸಲಾಗುವುದು, ಅಲ್ಲದೆ ಮುಂದಿನ ದಿನಗಳಲ್ಲಿ ರೈತರಿಗೆ ಅತಿ ಹೆಚ್ಚು ಅನುಕೂಲಗಳನ್ನು ಮಾಡಿಕೊಡುವ ಗುರಿಯನ್ನು ಹೋಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ತಾರಾನಗರದ ಶಾಂತಮ್ಮ,ಆಕಾಶ್ ಅದಿತ್ಯ ಯಶವಂತನಗರ, ಲಿಂಗವಶಿವÀಳ್ಳಿ ಯಶವಂತನಗರ, ಉಪ್ಪಾರಳ್ಳಿ ವಿಶಾಲಾಕ್ಷಿ ಲಕ್ಷ್ಮೀಪುರ ಇವರಿಗೆ ಟ್ಯಾಕ್ಟರ್ ಕೀ ನೀಡುವ ಮೂಲಕ ಹಸ್ತಾಂತರಿಸಲಾಯಿತು.
ಸಂಘದ ನಿರ್ದೇಶಕರಾದ ಜಿ.ವೀರೇಶ್, ತಿಪ್ಪಯ್ಯ, ಇಸ್ಮಾಯಿಲ್, ಉಪ್ಪಾರಳ್ಳಿ ಶಿವಮೂರ್ತಿ, ಕೆ.ಶರಣಪ್ಪ ನಾರಾಯಣಪುರ, ರಾಮನಾಯ್ಕ ಸುಶೀಲಾನಗರ, ಶಿವಲಿಂಗಪ್ಪ ವ್ಯವಸ್ಥಾಪಕರು, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.

One attachment • Scanned by Gmail