
ಕಲಬುರಗಿ :ಆ.3:ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಕಾರ್ಯಕ್ರಮಗಳು, ಬೆಳೆ, ಮಳೆ ಹವಾಮಾನ,ಕೀಟ, ರೋಗ ಸ್ಥಿತಿ ಕುರಿತು ದ್ವೈಮಾಸಿಕ ಕಾರ್ಯಕ್ರಮವನ್ನು ನಗರದ ಆಳಂದ ರಸ್ತೆಯಲ್ಲಿರುವಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆಯಿತು. ಕೃಷಿ ಇಲಾಖೆ, ತೊಗರಿ ಬೋರ್ಡ, ಆತ್ಮಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವಿಜ್ಞಾನಿಗಳು ಭಾಗವಹಿಸಿ ಕೃಷಿ ಸಮಸ್ಯೆಗಳು ಮತ್ತು ಅದಕ್ಕೆ ಹತೋಟಿ ಕ್ರಮಗಳನ್ನು ವಿವರಿಸಿದರು. ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ವಿಸ್ತರಣಾ ನಿರ್ದೇಶಕರಾದ ಡಾ. ಶಿವಶರಣಪ್ಪಾ ಗೌಡಪ್ಪ ರವರು ಮಾತನಾಡಿ ಜಿಲ್ಲೆಯ ರೈತರು ಕೃಷಿ ಸಮಸ್ಯೆಗಳನ್ನು ಪರಿಹರಿಸಲು ತಾಂತ್ರಿಕತೆಯನ್ನು ಹೊಂದಿದಸಣ್ಣ ವಿಡಿಯೋ ಮತ್ತು ವಾಟ್ಸಾಪ್ ಮೂಲಕ ಮಾಹಿತಿ ನೀಡಲು ತಿಳಿಸಿದರು. ರೈತರ ಯಶಸ್ಸಿನ ಯಶೋಗಾಥೆಗಳನ್ನು ಲೇಖನಗಳನ್ನು ಪ್ರಕಟಿಸಲು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕರಾದ ಸಮದ ಪಟೇಲ್, ತೊಗರಿ ಬೋರ್ಡ್ ನಿರ್ದೇಶಕರಾದ ಅಂಟೋನಿ ಮಾರಿಯಾ ಇಮ್ಯಾನೋಲ್, ಕೃಷಿ ಉಪನಿರ್ದೇಶಕರಾದ ಸೋಮಶೇಖರ್ ಬಿರಾದಾರ್, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ, ವಿಜ್ಞಾನಿಗಳಾದ ಡಾ. ಯುಸುಫ್‍ಅಲಿ ನಿಂಬರಗಿ, ಡಾ. ಜಹೀರ್ ಅಹೆಮದ್, ಡಾ. ಶ್ರೀನಿವಾಸ ಬಿ.ವಿ ರವರು ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಗಳ ಸಹಾಯಕ ಕೃಷಿ ನಿರ್ದೇಶಕರುಗಳು ಉಪಸ್ಥಿತರಿದ್ದರು.
ನಂತರ ನಡೆದ ಕೃಷಿ ತಂತ್ರಜ್ಞಾನ ಸಂಸ್ಥೆ, ಕಲಬುರಗಿ ಘಟಕದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ವಿ.ಆಯ್. ಬೆಣಗಿ,ವಿಶ್ರಾಂತ ಕುಲಪತಿಗಳು, ಕೃ.ವಿ.ವಿ ಧಾರವಾಡ, ಡಾ. ಜಿ.ಆರ್. ಪಾಟೀಲ್, ನಿವೃತ್ತ ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ, ಕಲಬುರಗಿ, ಡಾ. ವೀರಣ್ಣಾ ಕಮತಾರ, ಕಾರ್ಯದರ್ಶಿ, ಐ,ಎ.ಟಿ, ಬೆಂಗಳೂರು, ಡಾ. ಬೀಮಣ್ಣ, ನಿವೃತ್ತ ಡೀನ್ (ಸ್ನಾತಕೋತ್ತರ) ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ), ಕೃಷಿ ಮಹಾವಿದ್ಯಾಯ, ಕಲಬುರಗಿ, ಡಾ. ಆರ್. ಗುಂಡಪ್ಪಗೋಳ್, ನಿವೃತ್ತ ಹಿರಿಯ ವಿಜ್ಞಾನಿ (ಸೂಕ್ಷ್ಮಾಣುಶಾಸ್ತ್ರ), ಡಾ. ಎಂ.ಸಿ. ಮಾಣಿಕ್, ಅರಣ್ಯ ವಿಭಾಗ, ಡಾ. ಪುಣಾಶೆಟ್ಟಿ ಇವರುಗಳು ಉಪಸ್ಥಿತರಿದ್ದರು.