
”ಸಂಜೆವಾಣಿ ವಾರ್ತೆಸಿರಿಗೇರಿ ಆ.29. ಸಮೀಪದ ಸಿದ್ದರಾಂಪುರ ಗ್ರಾಮದಲ್ಲಿ ನಿನ್ನೆ ಆ.28 ರಂದು ಸೋಮವಾರ ಸಿರುಗುಪ್ಪ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ ಇಲಾಕೆ, ಮತ್ತು ಕಂದಾಯ ಅಧಿಕಾರಿಗಳ ನಿಯೋಗದಲ್ಲಿ ಬರಗಾಲ ಬೆಳೆಗಳ ಸಮೀಕ್ಷೆ ನಡೆಸಲಾಯಿತು. ಮುಂಗಾರು ಮಳೆ ಕೈಕೊಟ್ಟು, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಮಳೆ ಆಭಾವದಿಂದಾಗಿ ರೈತರು ಬೆಳೆನಷ್ಟ ಅನುಭವಿಸುವ ಹಂತದಲ್ಲಿರುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದು ಸರ್ಕಾರದಿಂದ ಘೋಷಣೆಯ ಆಗಿರುವ ಹಂತವಾಗಿ ನಿನ್ನೆ ತಾಲೂಕಿನಿಂದ ಆಯ್ಕೆಯಾದ ಸಿದ್ದರಾಂಪುರ ಮತ್ತು ಸಿರಿಗೇರಿ ಭಾಗದ ಬೆಳೆ ನಷ್ಟದ ಸಮೀಕ್ಷೆಯನ್ನು ಅಧಿಕಾರಿಗಳು ನಡೆಸಿದರು. ಜಿಲ್ಲಾ ಕೃಷಿ ನಿರ್ಧೇಶಕರಾದ ಡಾ.ಮಲ್ಲಿಕಾರ್ಜುನ ಮತ್ತು ಕೃಷಿ ಉಪನಿರ್ದೇಶಕರಾದ ಕೆಂಗೆಗೌಡ ಇವರ ನೇತೃತ್ವದಲ್ಲಿ ಸಿದ್ದರಾಂಪುರ ಗ್ರಾಮದ ಸುಮಾರು 220 ಎಕರೆ ಪ್ರದೇಶದಲ್ಲಿನ ನವಣೆ ಬೆಳೆ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ಪಡೆದುಕೊಂಡರು. ಇದೇವೇಳೆ ಕೃಷಿ ಅಧಿಕಾರಿಗಳಾದ ಪುರುಷೋತ್ತಮ ಇವರು ಮಾಹಿತಿ ನೀಡಿ ನಮ್ಮ ತಾಲೂಕು ಬರಗಾಲ ಪ್ರದೇಶವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿ ನವಣೆ, ಮೆಕ್ಕೆಜೋಳ, ಸಜ್ಜೆ, ಮೆಣಸಿನಕಾಯಿ, ತೊಗರಿ ಬೆಳೆಗಳ ಪರಿಸ್ಥಿತಿಯನ್ನು ನಮ್ಮ ಅಧಿಕಾರಿಗಳು ಸಮೀಕ್ಷೆ ನಡೆಸಿ ಅವರ ಮಾರ್ಗದರ್ಶನದಂತೆ ಮುಂಗಾರುಬೆಳೆ ಹಾನಿ ಯಾಪ್‍ನಲ್ಲಿ ಜಿಪಿಎಸ್ ಮೂಲಕ ಸೇರಿಸಲಾಗುವುದೆಂದು ತಿಳಿಸಿದರು. ಕೃಷಿಅಧಿಕಾರಿ ಹೇಮ್ಲಾನಾಯಕ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ರೈತ ಮುಖಂಡ ಶಿವಶಂಕರಗೌಡ ಇತರರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.