ಕೃಷಿ ತಿದ್ದುಪಡಿ ೩ ಕಾಯ್ದೆ : ರೈತರಿಗೆ ಮರಣ ಶಾಸನ

ಮಾನ್ವಿ.ಡಿ.೨೭- ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಸಾವಿರಾರು ರೈತರು ದೆಹಲಿಯಲ್ಲಿ ನಡೆಸುತ್ತಿರುವ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸುತ್ತೀರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಇಂದು ಪಟ್ಟಣದಲ್ಲಿ ಪ್ರಧಾನಿ ಮೋದಿ, ಉದ್ಯಮಿಗಳಾದ ಅಂಬಾನಿ, ಆದಾನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರೈತರಿಗೆ ಮರಣ ಶಾಸನವಾಗಿರುವ ಕೃಷಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಾಯ್ದೆಯನ್ನು ರದ್ದುಗೊಳಿಸಲು ಒತ್ತಾಯಿಸಿ ರೈತರು ದೆಹಲಿಯ ಸಿಂಘ ಗಡಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಸಾವಿರಾರು ರೈತರು ಕೊರೆಯುವ ಚಳಿಯ ಮಧ್ಯೆ ಪ್ರಾಣವನ್ನ ಲೆಕ್ಕಿಸದೆ ಕಳೆದ ೩೦ ದಿನಗಳಿಂದ ಕೇಂದ್ರದ ವಿರುದ್ಧನಡೆಸುತ್ತೀರುವ ಪ್ರತಿಭಟನಾ ಚಳುವಳಿಯನ್ನು ನರೇಂದ್ರ ಮೋದಿ ಸರ್ಕಾರ ರಾಜಕೀಯ ಕುತಂತ್ರದಿಂದ ಹೋರಾಟ ನಡೆಸುತ್ತಿದ್ದ ವರನ್ನು ಖಲಿಸ್ಥಾನವಾದಿಗಳು, ನಕ್ಸಲೈಟ್ಸ್, ವಿರೋಧ ಪಕ್ಷದವರೆಂದು ಬಿಂಬಿಸಿಬಾ ಅಪಪ್ರಚಾರ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಲಾಗುತ್ತದೆ.
ಕೆಂದ್ರ ಸರಕಾರ ಉದ್ಯಮಿಗಳ ಪರವಾಗಿ ಕಾಯ್ದೆಗಳನ್ನು ರೂಪಿಸುವ ಮೂಲಕ ರೈತರನ್ನು ದೇಶದದಲ್ಲಿ ಬೀದಿಪಾಲು ಮಾಡಲಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಸರ್ಕಾರ ನಡೆಸುವ ರೈತರ ಸಭೆಗಳಿಗೆ ರೈತ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಬೇಕು, ಕನಿಷ್ಠ ಬೆಂಬಲ ಬೆಲೆ (ಎಮ್.ಎಸ್.ಪಿ) ಕಾನೂನು ವ್ಯಾಪ್ತಿಗೊಳಪಡಿಸಬೇಕು,ದೆಹಲಿ ಮತ್ತು ಇತರೆ ರೈತ ಮೇಲೆ ಹಾಕಿತುವ ಕೇಸ್ ವಾಪಸ್ ಪಡೆಯಬೇಕು ಎಂದು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರಧಾನಿ ಮೋದಿ, ಉದ್ಯಮಿಗಳಾದ ಅಂಬಾನಿ, ಅಧಾನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್, ಲಾಲಪ್ಪ ನಾಯಕ, ವೀರೇಶ ನಾಯಕ, ರಮೇಶ ಸಿರವಾರ, ನಾಗರಾಜ, ಹುಲಿಗೆಪ್ಪ, ಮಾರೇಪ್ಪ ಲಕ್ಕಂದಿನ್ನಿ, ವೆಂಕಟೇಶ ನಾಯಕ ಸೇರಿದಂತೆ ಅನೇಕರಿದ್ದರು.