ಕೃಷಿ ತಾಂತ್ರಿಕ ಡೆಬೂತಿ ಸಚಿವರಿಂದ ವೀಕ್ಷಣೆ

ಕೋಲಾರ,ಜು.೨೩: ಡೆಬೂತಿ ದೇಶದ ಕೃಷಿ ಮಂತ್ರಿಗಳಾದ ಮಹಮದ್ ಅಹಮದ್ ಅವೇಲಿ ಮತ್ತು ಮಲ್ಟಿಪ್ಲೆಕ್ಸ್ ಗ್ರೂಫ್ ಆಫ್ ಕಂಪನೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸದಸ್ಯ ಮಹೇಶ್ ಶೆಟ್ಟಿ ಅವರು, ತಮ್ಮ ದೇಶದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾಂತ್ರಿಕೆತೆ ಕುರಿತು ವೀಕ್ಷಣೆ ನಡೆಸಿದರು.
ಕೋಲಾರ ನಗರದ ಬೈಪಾಸ್‌ನಲ್ಲಿರುವ ವಿಜಯಶ್ರೀ ಆಗ್ರೋ ಇನ್‌ಫಿಟ್ಸ್‌ನ ಮಳಿಗೆಯಲ್ಲಿನ ಮಲ್ಟಿಪ್ಲೆಕ್ಸ್ ಕಂಪನಿಯ ಉತ್ಫನ್ನಗಳನ್ನು ವೀಕ್ಷಿಸಿದರು, ನಂತರ ಪ್ರಗತಿಪರ ರೈತರಾದ ಚದುಮನಹಳ್ಳಿ ಅಮರನಾಥ್, ಕಾಳಹಸ್ತಿಯ ಬಾಲಕೃಷ್ಣ ಅವರ ಟೊಮೋಟೋ ಮತ್ತು ಬಜ್ಜಿ ಬೆಳೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಆಗ್ರೋ ಕೆಮಿಕಲ್ಸ್ ಸೌಥ್ ಇಂಡಿಯಾ ಚಿಫ್ ಮಾರ್ಕೆಟಿಂಗ್ ಆಫೀಸರ್, ಡಾ.ನಾರಾಯಣಸ್ವಾಮಿ, ಕೀಟ ಮತ್ತು ರೋಗಗಳ ಹತೋಟಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಶ್ರೀ ಆಗ್ರೋ ಇನ್‌ಫುಟ್ಸ್ ಅಂಗಡಿಯ ಮಾಲೀಕ ಎಂ.ನರೇಂದ್ರಕುಮಾರ್, ಕೋಲಾರ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫಿರ್‍ದೋಸ್, ಕೋಲಾರ ತಾಲೂಕು ಕೃಷಿ ಪರಿಕರ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಶ್ರೀರಾಮ ಆಗ್ರೋ ಸೀಡ್ಸ್‌ನ ಮಾಲೀಕ ಎಂ.ಎಸ್.ಗೌಡ ಮತ್ತು ಇನ್ನಿತರ ಪ್ರಗತಿಪರ ರೈತರು ಭಾಗವಹಿಸಿದ್ದರು.