ಕೃಷಿ ಜಂಟಿ ನಿರ್ದೇಶಕರಿಂದ ಕಬ್ಬು ಬೆಳೆಗಾರರಿಗೆ ಕಾರ್ಯಾಗಾರ

ಅಫಜಲಪುರ: ಫೆ.12:ತಾಲೂಕಿನ ಚಿಣಮಗೇರಾ ಗ್ರಾಮದ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯಲ್ಲಿ ಈ ಭಾಗದ ರೈತರು ಕಬ್ಬು ಬೆಳೆಯ ಕುರಿತು ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬೇಕಾದ ನಿಯಮಗಳ ಕುರಿತು ರೈತರಿಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಕಲಬುರ್ಗಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ರೈತರೊಂದಿಗೆ ಸಂವಾದ ನಡೆಸಿ ಪೂರಕ ಮಾಹಿತಿ ನೀಡಿದರು.

ದೇಶದಲ್ಲಿ ಎಕರೆಗೆ 165 ಟನ್ ಕಬ್ಬು ಬೆಳೆದು ಯಶಸ್ಸು ಸಾಧಿಸಿದ ರೈತರಿದ್ದಾರೆ. ಅದರಂತೆ ನಮ್ಮ ರೈತರು ಕೂಡ ಎಕರೆಗೆ 100 ಟನ್ ಕಬ್ಬು ಬೆಳೆಯಲು ಪ್ರಯತ್ನಿಸಬೇಕು. ನಿರಂತರವಾಗಿ ಕಬ್ಬು ಬೆಳೆದ ಭೂಮಿಯಲ್ಲಿ 3 ವರ್ಷದ ನಂತರ ಪರ್ಯಾಯ ಬೆಳೆ ಬೆಳೆಯಬೇಕು. ಇದರಿಂದ ಮಣ್ಣಿನ ಫಲವತ್ತತೆ ಹಾಗೂ ಪೆÇೀಷಕಾಂಶಗಳು ಹೆಚ್ಚುತ್ತವೆ. ಕಬ್ಬಿಗೆ ಹಂತ ಹಂತವಾಗಿ ರಸಗೊಬ್ಬರ ಮತ್ತು ನಿಯಮಿತವಾಗಿ ನೀರು ಬಿಡಬೇಕು. ಬೆಳಗಾವಿಯ ಸಂಕೇಶ್ವರದಲ್ಲಿ ಕಬ್ಬು ಬೆಳೆಯುವ ವಿಧಾನ ಮತ್ತು ಪದ್ಧತಿಗಳನ್ನು ತಿಳಿಸಿಕೊಡುವ ರಿಸರ್ಚ್ ಸೆಂಟರ್ ಇದ್ದು ನೀವೆಲ್ಲರೂ ಅಲ್ಲಿಗೆ ಹೊರಡಲು ತಯಾರಾದರೆ ಅಧ್ಯಯನಕ್ಕಾಗಿ ಕರೆದುಕೊಂಡು ಹೋಗಲಾಗುವುದು. ಕಬ್ಬು ಬೆಳೆಯುವ ಪ್ರಗತಿಪರ ರೈತರು ಸುಮಾರು 100 ಜನ ಕೂಡಿಕೊಂಡು ಒಂದು ಗ್ರೂಪ್ ಮಾಡಿಕೊಳ್ಳಬೇಕು. ಮತ್ತು ಅಲ್ಲಿ ಕಬ್ಬು ಬೆಳೆಯುವ ಪದ್ಧತಿ ಮತ್ತು ವಿಧಾನಗಳ ಕುರಿತು ಚರ್ಚಿಸಬೇಕು. ಹಾಗೂ ಕಬ್ಬು ಬೆಳೆದು ಯಶಸ್ಸು ಸಾಧಿಸಿದ ಪ್ರಗತಿಪರ ರೈತರ ಜಮೀನುಗಳಿಗೆ ಆಗಾಗ ಭೇಟಿ ನೀಡಿ ಅವರಿಂದ ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಕೆ.ಪಿ.ಆರ್ ಜಿ.ಎಂ ಜಿ.ಡಿ ಹುಕ್ಕೇರಿ ಮಾತನಾಡಿದರು.

ಇದೇ ವೇಳೆ ಭಾರತ್ ಟ್ರೇಡರ್ಸ್ ನ ಜೈನ್ ಇರಿಗೇಶನ್ ವತಿಯಿಂದ ಪೆÇ್ರಜೆಕ್ಟರ್ ಮೂಲಕ ರೈತರಿಗೆ ಮಾಹಿತಿ ನೀಡುವ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಪ್ರಸ್ತುತ ಪಡಿಸಲಾಯಿತು.

ಈ ವೇಳೆ ರೈತರು ಕಬ್ಬು ಬೆಳೆಯಲು ಪೂರಕವಾಗಿರುವ ಅಗತ್ಯ ಪ್ರಶ್ನೆಯನ್ನು ಕೇಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಚ್ ಗಡಗಿಮನಿ, ವಿ.ಪಿ ವೇಳಮೈಲ್, ಎ.ವಿ.ಪಿ ವರದರಾಜನ್, ಡಿ.ಜಿ.ಎಂ ರಾಜಶೇಖರ್, ಮಹಾದೇವ ತೆಗ್ಗೆಳ್ಳಿ ಸೇರಿದಂತೆ ಕಬ್ಬು ವಿಭಾಗದ ಸಿಬ್ಬಂದಿ ವರ್ಗ ಮತ್ತು ಸುಮಾರು 50 ಜನ ರೈತರು ಕಾರ್ಯಗಾರದ ಪ್ರಯೋಜನ ಪಡೆದುಕೊಂಡರು.