ಕೃಷಿ ಚಟುವಟಿಕೆಗಾಗಿ ಕಲಬುರಗಿ ಜಿಲ್ಲೆ ಲಾಕಡೌನ ತೆರವುಗೊಳಿಸಲು ಅಷ್ಠಗಿ ಮನವಿ

ಕಲಬುರಗಿ:ಜೂ.8: ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಕಡಿಮೆಯಾಗಿದ್ದು,ಈಗ ಸೋಂಕಿನ ಪ್ರಮಾಣ ಶೇ.3.01 ರಷ್ಟಿದೆ. ಮುಖ್ಯಮಂತ್ರಿಗಳು,ಶೇ.5 ಕ್ಕಿಂತ ಕಡಿಮೆ ಸೋಂಕಿನ ಪ್ರಮಾಣ ದಾಖಲಾದರೆ ಲಾಕಡೌನ ತೆರವುಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದಿರುವುದು ಇಲ್ಲಿ ಗಮನಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಲಾಕಡೌನ ತೆರವುಗೊಳಿಸುವ ಅಧಿಕಾರ ನೀಡಿರುವುದರಿಂದ ಕಲಬುರಗಿ ಜಿಲ್ಲೆಯನ್ನು ಲಾಕಡೌನ ಮುಕ್ತಗೊಳಿಸಲು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಗೆ ಮಂಗಾರು ಮಳೆ ಪ್ರವೇಶವಾಗಿದ್ದು,ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ.
ಈ ಹಿನ್ನೆಲೆಯಲ್ಲಿ ಮಂಜಾವಿನ 6 ಗಂಟೆಯಿಂದ ಮಧ್ಯಾಹ್ನ 12 ರ ವರಗೆ ಕೃಷಿ ಚಟುವಟಿಕೆಗೆ ವಿನಾಯ್ತಿ ನೀಡಿರುವ ಸಮಯ ಸಾಕಾಗುವುದಿಲ್ಲ.
ಕಾರಣ ಕೃಷಿ ಚಟುವಟಿಕೆಗಳಿಗೆ ಹಾಗೂ ಬೀಜ ಗೊಬ್ಬರ ಮತ್ತಿತರ ಪರಿಕರಗಳ ಖರೀದಿಗೆ ಜನಮುಗಿ ಬಿಳುತ್ತಿದ್ದು,ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ ಲಾಕಡೌನ ತೆರವುಗೊಳಿಸುವ ಅಥವಾ ಕೃಷಿ ಚಟುವಟಿಕೆಗಳಿಗೆ ಮುಂಜಾನೆ 6 ಗಂಟೆಯಿಂದ ರಿಂದ ಸಂಜೆ 7 ಗಂಟೆಯ ವರೆಗೆ ವಿನಾಯ್ತಿ ನೀಡುವುದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಅಂಬಾರಾಯ ಅಷ್ಠಗಿ ಪ್ರತಿಪಾದಿಸಿದ್ದಾರೆ.