“ಕೃಷಿ ಕ್ಷೇತ್ರ ಸಾಹಿತ್ಯದ ತೊಟ್ಟಿಲು” : ಸಹಕಾರಿ ಧುರೀಣ ಎಂ.ಆರ್. ಪಾಟೀಲ ಬಳ್ಳೊಳ್ಳಿ

ವಿಜಯಪುರ,ಜೂ.3:ಕೃಷಿ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಬೆಳವಣಿಗೆ ವೃದ್ಧಿಯಾಗಬೇಕು, ಕೂಲಿ ಕಾರ್ಮಿಕರ ಅನುಕೂಲತೆ ಹೆಚ್ಚುತ್ತದೆ. ಇಂದು ಸಾಹಿತ್ಯ ಪರಿಷತ್ತು ಇಂತಹ ವಿಷಯಗಳ ಕುರಿತು ಉಪನ್ಯಾಸ ಹಮ್ಮಿಕೊಂಡಿರುವದು ಅತ್ಯಂತ ಸಂತೋಷದ ಸಂಗತಿ ಎಂದು ಸಹಕಾರಿ ಧುರೀಣ ಎಂ.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಶ್ರಯದಲ್ಲಿ ಜಿಲ್ಲಾ ಸಾಹಿತ್ಯ ಸಭಾಂಗಣದಲ್ಲಿ ದಿ. ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿ , ದತ್ತಿ ದಾನಿಗಳು ಡಾ. ಅಶೋಕ ಸಾಸನೂರ ವಿಷಯ ಜಾನಪದ ಸಾಹಿತ್ಯ ಕುರಿತು ಚಿಂತನೆ, ದಿ. ರಾಯನಗೌಡ ಮ. ಪಾಟೀಲ ದತ್ತಿ, ದತ್ತಿ ದಾನಿಗಳು ಡಾ. ರಾಯನಗೌಡ ಪಾಟೀಲ ವಿಷಯ ಗ್ರಾಮೀಣ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳ ಕೊಡುಗೆ ಎಂಬ ಎರಡು ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಾಹಿತ್ಯ ಹುಟ್ಟಿ ಬೆಳದದ್ದು ಕೃಷಿ ವಲಯದಲ್ಲಿ. ಈ ಹಿನ್ನೆಲೆಯಲ್ಲಿ ಕೃಷಿ ಸಾಹಿತ್ಯ ಕ್ಷೇತ್ರದ ತೊಟ್ಟಿಲು ಎಂದರು
ಸಭೆಯ ಅಧ್ಯಕ್ಷತೆ ವಹಿಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿ, ವಿಜಯಪುರ ಜಿಲ್ಲೆ ಮಹಾನ್À ಶರಣರ ನಾಡು, ಜಾನಪದ ಸಾಹಿತ್ಯದÀ ಬೀಡು. ಇಂದು ಪರಿಷತ್ತು ಮಾಡುತ್ತಿರುವ ಕ್ರಿಯಾಶೀಲ ಕೆಲಸಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಬಸವಲಿಂಗಪ್ಪ ಸಾರವಾಡ ಮಾತನಾಡಿ, ಜನಪದ ಸಾಹಿತ್ಯ ಎಲ್ಲ ಸಾಹಿತಿಗಳ ತಾಯಿಬೇರು. ಜನಪದರು ನಿಸ್ವಾರ್ಥಿಗಳು ಆÀಗಿದ್ದರು. ಜನಪದರು ಕಾಯಕಕ್ಕೆ ಮಹತ್ವ ನೀಡಿದರು. ಆಧುನಿಕ ಭರಾಟೆಯಲ್ಲಿ ಜನಪದ ಸಂಸ್ಕøತಿ ನಸಿಸುತ್ತಿರುವದು ಅತ್ಯಂತ ಕಳವಳಕಾರಿ ವಿಷಯ ಎಂದರು, ಅನೇಕ ಪ್ರಕಾರದ ಜನಪದ ಹಾಡುಗಳು ಹಾಡುವದರ ಮೂಲಕ ಸಭೆಯನ್ನು ರಂಜಿಸಿದರು.
ಗ್ರಾಮೀಣ ಅಭಿವೃದ್ಧಿಗೆ ಸಹಕಾರ ಸಂಘಗಳ ಕೊಡುಗೆ ಕುರಿತು ರೈತ ಸಂಘದ ಮುಖಂಡ ಸಂಗಮೇಶ ಸಗರ ಮಾತನಾಡಿ, ಸರಕಾರದ ಯೋಜನೆಗಳು ನೈಜ ರೈತರಿಗೆ ತಲುಪುತ್ತಿಲ್ಲ, ಗುಣ ಮಟ್ಟದ ಬೀಜೋಪಚಾರಗಳಿಂದ ರೈತರು ವಂಚಿರಾಗಿದ್ದಾರೆ. ಆರ್ಥಿಕ ತೊಂದರೆಯಲ್ಲಿ ಇರುವ ರೈತರು ವೈಜ್ಞಾನಿಕ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ, ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ, ರೈತರು ಇಳುವರಿ ಹೆಚ್ಚು ಪಡೆಯಲು ತಂತ್ರಜ್ಞಾನ ಅಳವಡಿಕೊಳ್ಳುವದು ಅವಶ್ಯಕತೆ ಇದೆ ಎಂದರು.
ದತ್ತಿ ದಾನಿಗಳಾದ ದೀಲಿಪರಾಜ ರಾಯನಗೌಡ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ ಅಶೋಕ ಕುಮಾರ ಜಾಧವ ಬಸವರಾಜ ಇಜೇರಿ ವಂದಾಲ, ಈರಪ್ಪ ಶಿರೂರ , ಇಚೇರಿ ಅಕಾಡಮಿಯ ಅಧ್ಯಕ್ಷ ಬಸವರಾಜ ಇಜೇರಿ ಇವರನ್ನು ಸನ್ಮಾನಿಸಲಾಯಿತು.
ಡಾ ಮಾಧವ ಗುಡಿ ನಿರೂಪಿಸಿದರು. ಡಾ ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಡಾ ಸಂಗಮೇಶ ಮೇತ್ರಿ ವಂದಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ನಗರ ಘಟಕ ಅಧ್ಯಕ್ಷ ಅನ್ನಪೂರ್ಣ ಬೆಳ್ಳಣ್ಣವರ, ಪದಾಧಿಕಾರಿಗಳಾದ ರಾಜೇಸಾಬ ಶಿವನಗುತ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ವಿದ್ಯಾವತಿ ಅಂಕಲಗಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ , ಶಿಲ್ಪಾ ಭಸ್ಮೆ , ದತ್ತಿ ಸಂಚಾಲಕರಾದ ರಾಜಾಸಾಹೇಬ್ ಶಿವನಗುತ್ತಿ, ಬಿ ಎಂ ಅಜೂರ್, ಸಿದ್ರಾಮ್ಯೆ ಲಕ್ಕುಂಡಿ ಮಠ ಉಪಸ್ಥಿತರಿದ್ದರು.
ಮಹಾದೇವಿ ತೆಲಗಿ, ಕೆ ಸುನಂದ, ಗಂಗಮ್ಮ ರೆಡ್ಡಿ, ಮಮತಾ ಮುಳಸಾವಳಗಿ, ಶಾಂತ ವಿಭೂತಿ, ತೇಜಸ್ವಿನಿ ವಾಂಗಿ, ಎನ್.ಕೆ. ಕುಂಬಾರ, ವಿಠಲ ರಾಠೋಡ, ಆರ್.ಸಿ. ವಾಡೇದ, ಬಿ.ಎಸ್ ಬಳ್ಳೂರ, ಅಹಮದ್ ವಾಲಿಕಾರ, ಅಸ್ಲಾಂ ಮುಲ್ಲಾ, ಯುವರಾಜ್ ಚೊಳಕೆ, ಎ.ಡಿ. ಮುಲ್ಲಾ, ಐ.ಎಸ್.ಸರೂರ, ಆರ್,ಎಲ್ ಎಲ್ಗೋಡ. ಡಾ. ಸುರೇಶ ಕಾಗಲಕರರಡ್ಡಿ ಮುಂತಾದವರು ಇದ್ದರು.