ಕೃಷಿ ಕ್ಷೇತ್ರಕ್ಕೆ ರಾಜ್ಯ ಬಜೆಟ್‍ನಲ್ಲಿ ನಿರ್ಲಕ್ಷ್ಯ: ಪ್ರಾಧ್ಯಾಪಕ ಡಾ. ರೋಟ್ನಡಗಿ

ಕಲಬುರಗಿ:ಫೆ.16:ಕೃಷಿ ಕ್ಷೇತ್ರ ಸಮೃದ್ದವಾಗಿರಬೇಕಾದರೆ ಪ್ರಮುಖವಾಗಿ ನಿರಾವರಿ ಯೋಜನೆಗಳ ಮೇಲೆ ಹೆಚ್ಚು ಗಮನ ಕೊಡಬೇಕು 2024-2025ನೇ ಸಾಲಿನ ಕರ್ನಾಟಕ ರಾಜ್ಯ ಮುಂಗಡ ಪತ್ರದಲ್ಲಿ ನೀರಾವರಿ ಇಲಾಖೆಗೆ 19,179 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಇದರ ಪ್ರಮಾಣ ಇನ್ನೂ ಅಧಿಕವಾಗಬೇಕಾಗಿತ್ತು ಎಂದು ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಲಿಂಗರೆಡ್ಡಿ ರೋಟ್ನಡಗಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೃಷ್ಣ ಕೊಳ್ಳದ ಯೋಜನೆಗಳಿಗೆ ಹಾಗೂ ಮಹಾದಾಯಿ ಯೋಜನೆಗಳಿಗೆ ಅನುದಾನ ನಿಗದಿಪಡಿಸಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಅನ್ಯಾಯವಾಗಿದೆ. ರಾಜ್ಯದ ರೈತರ ಆದಾಯ ದ್ವಿಗುಣವಾಗಬೇಕಾದರೆ ಹಾಗೂ ಅವರ ಜೀವನ ಮಟ್ಟ ಉತ್ತಮಗೊಳ್ಳಬೇಕೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆಗೆ ಹಿಂದಿನ ರಾಜ್ಯ ಸರ್ಕಾರ ನೀಡುತ್ತಿದ್ದ ಅನುದಾನದ ಬೆಂಬಲವನ್ನು ಈಗಿನ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಅನುದಾನ ಸಿಗುತ್ತಿಲ. ಈ ಸಾಲಿನ ಮುಂಗಡ ಪತ್ರದಲ್ಲಿ ಕರ್ನಾಟಕದ ಮುಜುರಾಯಿ ಇಲಾಖೆಯಿಂದ ಸಂಗ್ರಹವಾಗುವ ಸರಿಸುಮಾರು 500 ಕೋಟಿ ರೂ.ಗಳ ಆದಾಯದಲ್ಲಿ 330 ಕೋಟಿ ರೂ.ಗಳ ಹಣವನ್ನು ಹಜ್ ಭವನ ನಿರ್ಮಾಣ, ವಕ್ಫ್ ಬೋರ್ಡ್, ಕ್ರಿಶ್ಚಿಯನ್ ಸಮುದಾಯಕ್ಕೆ ಅನುದಾನ ನೀಡಿರುವುದು ಸರಿಯಲ್ಲ. ಯಾವುದೋ ಒಂದು ಧರ್ಮವನ್ನು ಒಲೈಸಿಕೊಳ್ಳಲು ಅನುದಾನದ ನಿಡುವಿಕೆಯಲ್ಲಿ ತಾರತಮ್ಯವನ್ನು ಮಾಡಿರುವುದು ಸ್ಪಷ್ಟವಾಗಿ ಮುಂಗಡ ಪತ್ರದಲ್ಲಿ ಗೋಚರಿಸಿದೆ ಎಂದು ಅವರು ಟೀಕಿಸಿದ್ದಾರೆ.