
ಹೈದರಾಬಾದ್, ಮೇ.15- ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೃಷಿಯನ್ನು ಸರ್ಕಾರಗಳ ಆದ್ಯತೆಯ ಕ್ಷೇತ್ರವಾಗಿ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಇಂಟಿಗ್ರೇಟೆಡ್ ಬಯೋ ಕಂಟ್ರೋಲ್ ಲ್ಯಾಬ್ ಮತ್ತು ಗೋಲ್ಡನ್ ಜುಬಿಲಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೃಷಿಯನ್ನು ಲಾಭದಾಯಕ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾರತ ಜಿ- 20 ಅಧ್ಯಕ್ಣತೆಯ ಸಂದರ್ಭದಲ್ಲಿ ಪ್ರಪಂಚದ ಕಲ್ಯಾಣದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿಗೆ ಬಹಳ ನಿರ್ಣಾಯಕ ಎಂದು ಅವರು ಹೇಳಿದ್ದಾರೆ.
ದೇಶ ಈಗ ಏನನ್ನು ಬಯಸುತ್ತದೋ ಅದನ್ನು ಸಾಧಿಸುವ ಶಕ್ತಿ ಬಂದಿದೆ ಎಂದು ಹೇಳಿದ ಅವರು ಕೃಷಿ ಕ್ಷೇತ್ರ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಿದ್ದಾರೆ.
ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವ್ಉ ಸಂಶೋಧನೆಯ ಫಲವನ್ನು ರೈತರಿಗೆ ತಲುಪಿಸುವಂತೆ ವಿಸ್ತರಣಾಧಿಕಾರಿಗಳ ಕರ್ತವ್ಯ ಎಂದಿದ್ದಾರೆ.
ಕೃಷಿ ಉತ್ಪಾದಕತೆ ಹೆಚ್ಚಿಸಲು ಅನುಕೂಲವಾಗುವಂತೆ ಪ್ರಯೋಗಾಲಯದಲ್ಲಿ ಆಗುವ ಸಂಶೋಧನೆ ಲಾಭಗಳನ್ನು ಭೂಮಿಗೆ ತಲುಪಿಸುವ ಕೆಲಸ ಮಾಡಬೇಕು. ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಅವರು ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯ ಕೃಷಿ ಸಚಿವ ಸಿಂಗಿರೆಡ್ಡಿ ನಿರಂಜನ್ ರೆಡ್ಡಿ ಅವರು ರಾಜ್ಯ ಕೃಷಿ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳಲ್ಲಿ ಸೌಲಭ್ಯಗಳನ್ನು ಬೆಂಬಲಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.