ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ – ಕೆ.ಆರ್.ಎಸ್ ಸಿಹಿ ಹಂಚಿ ಸಂಭ್ರಮಾಚರಣೆ


ಸಿರವಾರ.ನ.22- ರೈತರಿಗೆ ಮಾರಾಕಗಿರುವ ೩ ಕೃಷಿ ಕಾಯ್ದೆಗಳನ್ನು ಜಾರಿಗೆ ತರಬೇಕೆಂದು ಉತ್ಸುಕತೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತರದೆ ಹಿಂಪಡೆದಿರುವುದು ರೈತ ಹೋರಾಟಕ್ಕೆ ಸಂಧ ಜಯವಾಗಿದೆ ಎಂದು ಕರ್ನಾಟಕ ರೈತ ಸಂಘ( ಕೆ.ಆರ್.ಎಸ್) ತಾಲೂಕ ಅದ್ಯಕ್ಷ ನಾಗರಾಜಬೊಮ್ಮನಾಳ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಂದು ಬೆಳಗ್ಗೆ ಕೆಆರ್ ಎಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿ ಮಾತನಾಡಿದ ಅವರು ಪ್ರದಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ೩ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್? ತೆಗೆದುಕೊಂಡಿರುವುದು ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ದೇಶದ ಜನರಿಗೆ ಅನ್ನ ನೀಡುವ, ದೇಶದ ಬೆನ್ನೆಲುಬಾದ ರೈತರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಬಾಯಿ ಮಾತಿನ ಹೇಳಿಕೆ ನೀಡದೆ ಕಾನೂನಾತ್ಮಕವಾಗಿ ಹಿಂಪಡೆಯಬೇಕು. ಕೃಷಿ ಕಾಯ್ದೆ ಹೋರಾಟದಲ್ಲಿ ೭೫೦ ಜನರು ಮೃತಪಟ್ಟವರಿಗೆ ಯಾರು ಹೊಣೆ..? ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ರಾಜ್ಯದಲ್ಲಿಯೂ ಕೇಲ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದರು. ಪ್ರದಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ೩ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್? ತೆಗೆದುಕೊಂಡಿರುವುದು ರೈತರ ಹೋರಾಟಕ್ಕೆ ದೊರೆತ ವಿಜಯವಾಗಿದೆ. ದೇಶದ ಜನರಿಗೆ ಅನ್ನ ನೀಡುವ ದೇಶದ ಬೆನ್ನೆಲುಬಾದ ರೈತರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ರೈತರ ಕೃಷಿ ಕಾಯ್ದೆ ಹೋರಾಟದಲ್ಲಿ ೭೦೦ ಜನರು ಮೃತಪಟ್ಟವರಿಗೆ ಯಾರು ಹೊಣೆ..? ಅವರಿಗೆ ಪರಿಹಾರ ನೀಡಬೇಕು. ಕೆ.ಆರ್.ಎಸ್ ನ ಪದಾಧಿಕಾರಿಗಳಾದ ಹುಲಿಗೆಪ್ಪ ಮಡಿವಾಳ, ಚಂದ್ರು ಹಡಪದ್, ರಮೇಶ್ ಅಂಗಡಿ, ಲಿಂಗಪ್ಪ, ಸೂರಿ ಹುಲಿಗೇಪ್ಪ, ಮೌಲಪ್ಪ, ವೆಂಕಟೇಶ, ಮರಿಯಪ್ಪ, ಎಚ್ ಕೆ ಬಸವರಾಜ, ಚನಬಸವ ಸುರೇಶ, ಬೀಮಣ್ಣ ಬಸವರಾಜ್, ಮನೋಜ್ ,ಗೋರಪ್ಪ ,ದೇವಪ್ಪ, ಶಿವಪ್ಪ, ಮನೋಹರ, ಮಲ್ಲಿಕಾರ್ಜುನ ಹುಡೇದ್,ರಮೇಶ ಸೇರಿದಂತೆ ಇನ್ನಿತರರು ಇದರು.