ಕೃಷಿ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆ.೨೭ರಂದು ಭಾರತ ಬಂದ್

ರಾಯಚೂರು.ಸೆ.೨೪.ಕೃಷಿ ಕಾಯ್ದೆ,ವಿದ್ಯುತ್ ಮಸೂದೆ ವಿರೋಧಿ ಕೃಷಿ ಸಂಕಟವನ್ನು ಪರಿಹಾರಕ್ಕಾಗಿ ಸೆ.೨೭ರಂದು ಅಖಿಲ ಭಾರತ ಬಂದ್ ಮಾಡಲಾಗುವುದೆಂದು ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾ ಸಮಿತಿಯ ಮುಖಂಡರಾದ ಚಾಮರಸ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಮಾಡಲಾಗುತ್ತದೆ ಎಂದು ಆಸ್ವಾವಸನೆ ನೀಡಿದ್ದರು ಆದರೆ ೭ ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ ಕೃಷಿ ಸಂಕಟ ಪರಿಹಾರವಾಗಿಲ್ಲ,ಸ್ವಾಮಿನಾಥನ್ ವರದಿ ಜಾರಿಯಾದರೆ ರೈತರಿಗೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡುವ ಮೂರು ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ೧೦ ತಿಂಗಳಿಂದ ನಿರಂತರ ಹೋರಾಟ ನಡೆದಿದ್ದು ಸುಮಾರು ೬ರಿಂದ೭ಜನ ರೈತರು ಹುತಾತ್ಮರಾಗಿದ್ದು ಇವರಿಗೆ ವಿದ್ಯುತ್, ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ರದ್ದು ಮಾಡಿದರು ಹೋರಾಟವನ್ನು ಬಿಡುತ್ತಿಲ್ಲ.
ಅದರಿಂದ ಈ ಕೃಷಿ ಸಂಕಟ ಪರಿಹಾರ ಆಗುವ ವರೆಗೆ ಬಿಡುವುದಿಲ್ಲ ಕೃಷಿ ಕಾಯ್ದೆ,ವಿದ್ಯುತ್ ಮಸೂದೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ವಿರೋಧಿಸಿ ಸೆ.೨೭ರಂದು ಅಖಿಲ ಭಾರತ ಬಂದ್ ಮಾಡಲಾಗುವುದು.
ಸೆ.೨೭ರಂದು ಬೆಳಿಗ್ಗೆ ೬ಗಂಟೆಯಿಂದ ಪ್ರಾರಂಭವಾಗಲಿದ್ದು ಬಂದ್ ಗೆ ಬೆಂಬಲಿಸಲು ಸಾರ್ವಜನಿಕರ ಹತ್ತಿರ ಮನವಿ ಮಾಡಿಕೊಂಡು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿ ಮಧ್ಯಾಹ್ನ೧ ಗಂಟೆಗೆ ನಗರದ ವಿವಿಧ ವೃತ್ತಗಳ ಮುಖಂತರಾ ಪ್ರತಿಭಟನೆಯನ್ನು ಅಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಜಿ.ವೀರೇಶ್,ಅಸ್ಲಮ್ ಪಾಷಾ,ಅಬ್ದುಲ್ ಮಜೀದ್,ರಾಂಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.